ಆಸ್ತಿ, ಮನೆ ಖರೀದಿಸಬೇಕೇ? ನಿಮ್ಮ ಬ್ರೋಕರ್ ಮತ್ತು ಬಿಲ್ಡರ್ ಗಳು ರೇರಾ ದಾಖಲಾತಿ ಮಾಡಿಕೊಂಡಿದ್ದಾರೆಯೆ ಪರಿಶೀಲಿಸಿ
ಸಂಸತ್ತು ಜಾರಿಗೆ ತಂದಿರುವ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ, ರೇರಾ 2016...

ಹೈದರಾಬಾದ್: ಸಂಸತ್ತು ಜಾರಿಗೆ ತಂದಿರುವ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ, ರೇರಾ 2016, ಗೃಹ ಖರೀದಿಯವರನ್ನು ಡೆವೆಲಪರ್ ಗಳು ಮತ್ತು ಆಸ್ತಿ ಮರಾಟದ ಮಧ್ಯವರ್ತಿಗಳ ಹಾವಳಿಯಿಂದ ರಕ್ಷಿಸಲು ಜಾರಿಗೆ ತಂದಿರುವ ಕಾಯ್ದೆಯಾಗಿದೆ. ಮನೆ ಖರೀದಿಸುವಾಗ ಬಿಲ್ಡರ್ ಗಳು ಮತ್ತು ಬ್ರೋಕರ್ ಗಳು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಮುಂದೆ ದಾಖಲಾತಿ ಮಾಡಿಕೊಂಡಿದ್ದಾರೆಯೇ ಎಂದು ಆರಂಭದಲ್ಲಿ ಪರಿಶೀಲಿಸಿಕೊಳ್ಳಬೇಕು.
ಬಿಲ್ಡರ್ ಗಳು ಕೆಲವು ನಿಖರತೆಗಳೊಂದಿಗೆ ಮನೆಗಳನ್ನು ನೀಡುತ್ತೇವೆ ಎಂದು ಆರಂಭದಲ್ಲಿ ಭರವಸೆ ನೀಡಿ ನಂತರ ಕೊನೆಗೆ ಮತ್ತೊಂದು ಕೊಡುತ್ತಾರೆ ಅಥವಾ ಆಸ್ತಿ ಮಾರಾಟ ಮಾಡುವಾಗ ಅದರ ನಿಖರತೆಯಲ್ಲಿ ಮತ್ತು ಬೆಲೆಯಲ್ಲಿ ಬದಲಾವಣೆಗಳನ್ನು ಮಾಡುತ್ತಾರೆ. ಆರಂಭದಲ್ಲಿ ನೀಡಿದ ಮಾತಿಗೆ ಬದ್ಧರಾಗಿರುವುದಿಲ್ಲ. ಆಸ್ತಿ ಖರೀದಿಸಿದವರು ಮೋಸ ಹೋಗುವ ಸಾಧ್ಯತೆ ಹೆಚ್ಚಳವಾಗಿರುತ್ತದೆ. ಆದರೆ ಇನ್ನು ಮುಂದೆ ಅಂತಹ ಸಮಸ್ಯೆಗಳಿರುವುದಿಲ್ಲ. ರೇರಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ಬಂದರೆ ಮನೆ ಖರೀದಿಸುವವರಿಗೆ ವರದಾನವಾಗಲಿದೆ.
ಬಿಲ್ಡರ್ ಗಳು ಅಥವಾ ಬ್ರೋಕರ್ ಗಳು ತಮ್ಮ ವಹಿವಾಟು ಮುಗಿಯುವುದರೊಳಗೆ ನೀಡಿದ್ದ ಭರವಸೆಗಳನ್ನು ಈಡೇರಿಸದಿದ್ದರೆ ರೇರಾ ಕಾಯ್ದೆಯಡಿ ಮನೆ ಖರೀದಿಸುವವರು ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಅನೇಕರಿಗೆ ಬ್ರೋಕರ್ ಗಳು ಅಥವಾ ಮಧ್ಯವರ್ತಿಗಳು ಕೂಡ ರೇರಾ ಕಾಯ್ದೆಯಡಿ ಬರುತ್ತಾರೆ ಎನ್ನುವುದು ಗೊತ್ತಾಗುವುದಿಲ್ಲ ಎನ್ನುತ್ತಾರೆ ಕ್ರೆಡೈಯ ಹಿರಿಯ ಪ್ರತಿನಿಧಿ ಗುಮ್ಮಿ ರಾಮ್ ರೆಡ್ಡಿ.
ರೇರಾ ಕಾಯ್ದೆ ಜಾರಿಗೆ ಬಂದು ಸುಮಾರು ಒಂದು ವರ್ಷಕ್ಕೂ ಹೆಚ್ಚಾಗಿದೆ. ಈ ಮಹತ್ವಪೂರ್ಣ ಕಾಯ್ದೆಯನ್ನು ಅನೇಕ ರಾಜ್ಯಗಳು ಜಾರಿಗೆ ತರಲು ಆರಂಭಿಸಿವೆ. ಮನೆ ಖರೀದಿಸುವವರು ಸ್ಥಳೀಯ ರೇರಾ ಅಧಿಕಾರಿಗಳಿಂದ ತಮ್ಮ ಮಧ್ಯವರ್ತಿಗಳು ದಾಖಲಾತಿ ಮಾಡಿಕೊಂಡಿದ್ದಾರೆಯೇ ಎಂದು ಅಥವಾ ರಾಜ್ಯದ ರೇರಾ ವೆಬ್ ಸೈಟ್ ನಲ್ಲಿ ಪರಿಶೀಲಿಸಬಹುದು.
ಕೇವಲ ನಿಯಂತ್ರಣವಿದ್ದರೆ ಸಾಲದು, ಮನೆ ಖರೀದಿಸುವವರಿಗೆ ರೇರಾ ಕಾಯ್ದೆ ಬಗ್ಗೆ ಅರಿವು ಇರಬೇಕು. ಆಸ್ತಿ ಮಧ್ಯವರ್ತಿಗಳು ಕೂಡ ರೇರಾ ಕಾಯ್ದೆಯಡಿ ದಾಖಲಾತಿ ಮಾಡಿಕೊಳ್ಳಬೇಕೆಂದು ಹಲವು ಬಾರಿ ಮನೆ ಖರೀದಿಸುವವರಿಗೆ ಗೊತ್ತಿರುವುದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


