ವಾಣಿಜ್ಯ

ಪೆಟ್ರೋಲ್-ಡೀಸೆಲ್ ಗೂ ಜಿಎಸ್ಟಿ ಅನ್ವಯಿಸಬೇಕು: ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್

ಏಕರೂಪ ತೆರಿಗೆ ವ್ಯವಸ್ಥೆ ಜಿಎಸ್ ಟಿ ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನಗಳ ಮೇಲೂ ಜಾರಿಯಾಗಬೇಕು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ...

ಪೆಟ್ರೋಲ್-ಡೀಸೆಲ್ ಗೂ ಜಿಎಸ್ಟಿ ಅನ್ವಯಿಸಬೇಕು: ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್
Published On :
ನವದೆಹಲಿ: ಏಕರೂಪ ತೆರಿಗೆ ವ್ಯವಸ್ಥೆ ಜಿಎಸ್ ಟಿ ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನಗಳ ಮೇಲೂ ಜಾರಿಯಾಗಬೇಕು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಹೇಳಿದ್ದಾರೆ.
ದಿನೇ ದಿನೇ ಏರೆಕೆಯತ್ತ ಮುಖ ಮಾಡಿರುವ ಪೆಟ್ರೋಲ್-ಡೀಸೆಲ್ ಉತ್ಪನ್ನಗಳ ದರದಿಂದಾಗಿ ಗ್ರಾಹಕರು ಕಂಗಾಲಾಗಿರುವಂತೆಯೇ ಇತ್ತ ಪೆಟ್ರೋಲ್-ಡೀಸೆಲ್ ಉತ್ಪನ್ನಗಳಿಗೂ ಜಿಎಸ್ ಟಿ ಜಾರಿಯಾಗಬೇಕು ಎಂದು ಸಚಿವರು ಹೇಳುತ್ತಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ದೇಶದ ಗ್ರಾಹಕರು ಪೆಟ್ರೋಲ್ ಡೀಸೆಲ್ ಉತ್ಪನ್ನಗಳಿಗೆ ಗರಿಷ್ಟ ಪ್ರಮಾಣದ ತೆರಿಗೆ ನೀಡುತ್ತಿದ್ದಾರೆ. ಇದೇ  ಕಾರಣಕ್ಕೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಗೂ ಜಿಎಸ್ ಯಿ ಅನ್ವಯವಾಗಬೇಕು ಎಂದು ಹೇಳುತ್ತಿದೆ. ಇದರಿಂದ ಹೆಚ್ಚುವರಿ ತೆರಿಗೆಗಳಿಗೆ ಕಡಿವಾಣ ಬಿದ್ದು ದರ ಇಳಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕಳೆದೊಂದು ವಾರದಿಂದ ಸತತವಾಗಿ ಪೆಟ್ರೋಲ್ ಡೀಸೆಲ್ ದರಗಳಲ್ಲಿ ಏರಿಕೆಯಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೆಟ್ರೋಲಿಯಂ ಸಚಿವರು, ಅಮೆರಿಕದ ಟೆಕ್ಸಾಸ್ ನಲ್ಲಿ ಉಂಟಾದ ಚಂಡಮಾರುತದಿಂದಾಗಿ  ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆಯಲ್ಲಿ ಶೇ.13ರಷ್ಟು ಕಡಿತವಾಗಿದೆ. ಹೀಗಾಗಿ ಪೆಟ್ರೋಲ್ ಕೊರತೆ ಎದುರಾಗಿದ್ದು, ಇದರಿಂದಾಗಿಯೇ ದರ ಏರಿಕೆಯಾಗುತ್ತಿದೆ. ಇನ್ನೊಂದು  ವಾರದಲ್ಲಿ ಮತ್ತೆ ಪರಿಸ್ಥಿತಿ ಸಮಾನ್ಯವಾಗಲಿದೆ ಎಂದು ಪ್ರಧಾನ್ ಹೇಳಿದ್ದಾರೆ.
ಜುಲೈ ಮೊದಲ ವಾರದಿಂದ ಈ ವರೆಗೂ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಸತತ ಏರಿಕೆ ಕಂಡುಬಂದಿದ್ದು, ಜುಲೈ ತಿಂಗಳ ದರಕ್ಕೆ ಹೋಲಿಕೆ ಮಾಡಿದರೆ ಈ ವರೆಗೂ ಸುಮಾರು 6 ರು.ಗಳ ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.