ದ್ವಿತೀಯ ತ್ರೈಮಾಸಿಕ ವರದಿ: ಕೆನರಾ ಬ್ಯಾಂಕ್ ಗೆ 260 ಕೋಟಿ ರೂ. ಲಾಭ
ಭಾರತದ ಪ್ರಮುಖ ರಾಷ್ಟ್ರೀಕೃತ ಬ್ಯಾಕ್, ಕೆನರಾ ಬ್ಯಾಂಕ್, ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ 260.18 ಕೋಟಿ ರೂ.ನಿವ್ವಳ ಲಾಭ ದಾಕಲಿಸಿದೆ.

Published On :
ಬೆಂಗಳೂರು: ಭಾರತದ ಪ್ರಮುಖ ರಾಷ್ಟ್ರೀಕೃತ ಬ್ಯಾಕ್, ಕೆನರಾ ಬ್ಯಾಂಕ್, ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ 260.18 ಕೋಟಿ ರೂ.ನಿವ್ವಳ ಲಾಭ ದಾಕಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 357 ಕೋಟಿ ರೂ.ಲಾಭ ಗಳಿಕೆಗೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ 27 ರಷ್ಟು ಇಳಿಕೆಯಾಗಿದೆ.
"ಬ್ಯಾಂಕ್ ನ ಒಟ್ಟು ಆದಾಯ 12,187 ಕೋಟಿ ರೂ. ಗಳಿಂದ 11,995 ಕೋಟಿ ರೂ. ಗಳಿಗೆ ಇಳಿಕೆಯಾಗಿದೆ" ಎಂದು ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶರ್ಮಾ ಮಾಹಿತಿ ನೀಡಿದ್ದಾರೆ.
ಭವಿಷ್ಯದಲ್ಲಿ ಎದುರಾಗಬಹುದಾದ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು 1,558 ಕೋಟಿ ರೂ. ಗಳಿಂದ 1,950 ಕೋಟಿ ರೂ ಗಳಿಗೆ ಏರಿಸಲಾಗಿದೆ. ವಸೂಲಿಯಾಗದ ಸಾಲದ ಪ್ರಮಾಣ ಶೇ 6.69 ರಿಂದ ಶೇ 7.02ಕ್ಕೆ ಏರಿದೆ. ಇದರಿಂದಾಗಿ ಬ್ಯಾಂಕ್ ನ ಒಟ್ತು ನಿವ್ವಳ ಲಾಬಾಂಶದಲ್ಲಿ ಇಳಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
net profitನಿವ್ವಳ ಲಾಭCanara Bankಕೆನರಾ ಬ್ಯಾಂಕ್second quarter of fiscalCanara Bank Q2 reportಹಣಕಾಸು ವರ್ಷದ ಎರಡನೇ ತ್ರೈಮಾಸಿಕ ವರದಿಕೆನರಾ ಬ್ಯಾಂಕ್ ದ್ವಿತೀಯ ತ್ರೈಮಾಸಿಕ ವರದಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


