ಧನತ್ರಯೋದಶಿ ದಿನದಂದು ಮಾರಾಟವಾದ ಹಿರೋ ಮೋಟೊ ಕಾರ್ಪ್ ಸಂಖ್ಯೆ ಎಷ್ಟು ಗೊತ್ತೆ?
ಅ.17, ಧನತ್ರಯೋದಶಿಯಂದು ಒಂದೇ ದಿನ 3 ಲಕ್ಷ ಯುನಿಟ್ ಗಳಷ್ಟು ವಾಹನಗಳನ್ನು ಮಾರಾಟ ಮಾಡಿರುವುದಾಗಿ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದಕ ಹಿರೋ ಮೋಟೊ ಕಾರ್ಪ್ ಹೇಳಿದೆ.

Published On :
ನವದೆಹಲಿ: ಅ.17, ಧನತ್ರಯೋದಶಿಯಂದು ಒಂದೇ ದಿನ 3 ಲಕ್ಷ ಯುನಿಟ್ ಗಳಷ್ಟು ವಾಹನಗಳನ್ನು ಮಾರಾಟ ಮಾಡಿರುವುದಾಗಿ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದಕ ಹಿರೋ ಮೋಟೊ ಕಾರ್ಪ್ ಹೇಳಿದೆ.
ಜಾಗತಿಕವಾಗಿ ಈ ಮೈಲುಗಲ್ಲು ಸಾಧಿಸಿದ ಮೊದಲ ಸಂಸ್ಥೆ ಹಿರೋ ಮೋಟೊ ಕಾರ್ಪ್ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ದೀಪಾವಳಿ ಹಬ್ಬದ ಸೀಸನ್ ಹಿರೋ ಮೋಟೊ ಕಾರ್ಪ್ ಗೆ ಬ್ಲಾಕ್ ಬಾಸ್ಟರ್ ಆಗಿದೆ. ಒಂದೇ ದಿನ 3 ಲಕ್ಶ ಯುನಿಟ್ ನಷ್ಟು ಬೈಕ್ ಗಳು ಮಾರಾಟವಾಗಿರುವುದು ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ 7 ಲಕ್ಷ ಯುನಿಟ್ ನಷ್ಟು ವಾಹನಗಳು ಮಾರಾಟವಾಗಿದ್ದವು ಎಂದು ಎರಡನೇ ತ್ರೈಮಾಸಿಕದಲ್ಲಿ 2 ಮಿಲಿಯನ್ ಯುನಿಟ್ ಗಳಷ್ಟು ಬೈಕ್ ಗಳು ಮಾರಾಟವಾಗಿದ್ದವು ಎಂದು ಸಂಸ್ಥೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


