ಜಿಯೋ ಗೆ ಸೆಡ್ಡು, ಏರ್ ಟೆಲ್ ಜೊತೆ ಟಾಟಾ ಟೆಲಿ ಸರ್ವೀಸ್ ವಿಲೀನ
ಟಾಟಾ ಸಮೂಹದ ಟಾಟಾ ಟೆಲೆಸರ್ವಿಸಸ್ ಮೊಬೈಲ್ ಸೇವಾ ಸಂಸ್ಥೆ ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್ಟೆಲ್ ಲಿಮಿಟೆಡ್ ನಲ್ಲಿ ವಿಲೀನವಾಗಿದೆ.

Published On :
ಮುಂಬಯಿ: ಟಾಟಾ ಸಮೂಹದ ಟಾಟಾ ಟೆಲೆಸರ್ವಿಸಸ್ ಮೊಬೈಲ್ ಸೇವಾ ಸಂಸ್ಥೆ ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್ಟೆಲ್ ಲಿಮಿಟೆಡ್ ನಲ್ಲಿ ವಿಲೀನವಾಗಿದೆ. ಈ ಮೂಲಕ ಭಾರತ ಮಾರುಕಟ್ಟೆಯಲ್ಲಿ ವ್ಯಾಪಿಸುತ್ತಿರುವ ಜಿಯೋ ಪ್ರಭಾವವನ್ನು ಎದುರಿಸಲು ಏರ್ ಟೆಲ್ ಮುಂದಾಗಿದೆ.
ಲೆಸರ್ವಿಸಸ್ ಲಿಮಿಟೆಡ್ (ಟಿಟಿಎಂಎಲ್) ಮತ್ತು ಟಾಟಾ ಟೆಲಿಸರ್ವಿಸಸ್ ಮಹಾರಾಷ್ಟ್ರ ಲಿಮಿಟೆಡ್‌ನ (ಟಿಟಿಎಂಎಲ್) ಗಳನ್ನು ಏರ್ ಟೆಲ್ ನೊಂದಿಗೆ ವಿಲೀನಗೊಳಿಸಲಾಗಿದೆ.
ಆದರೆ ಈ ವಿಲೀನ ಪ್ರಕ್ರಿಯೆಯಲ್ಲಿ ಏರ್ ಟೆಲ್, ಟಾಟಾ ಟೆಲಿ ಸರ್ವೀಸ್ ನ 40 ಸಾವಿರ ಕೋಟಿ ರೂ. ಸಾಲ ತೀರಿಸುವ ಅಥವಾ ಖರೀದಿಗೆ ನಗದು ಪಾವತಿಸುವ ಪ್ರಸ್ತಾವ ಇರುವುದಿಲ್ಲ.. ಹೀಗಾಗಿ ಏರ್ ಟೆಲ್ ಪಾಲಿಗೆ ಈ ಸ್ವಾಧೀನ ಪ್ರಕ್ರಿಯೆ ಅತ್ಯಂತ ಸುಲಭವಾಗಿದೆ. ತರಂಗಾಂತರಗಳ ಖರೀದಿಗಾಗಿ ಪಾವತಿಸಬೇಕಾದ 10 ಸಾವಿರ ಕೋಟಿ ರೂ. ನ್ನು ಸಹ ಟಾಟಾ ಸಂಸ್ಥೆಯೇ ಭರಿಸಲಿದೆ.
ವಿಲೀನದಿಂದಾಗಿ ಟಾಟಾ ಸಂಸ್ಥೆಯ 4 ಕೋಟಿ ಮೊಬೈಲ್ ಗ್ರಾಹಕರು ಏರ್ ಟೆಲ್ ನ ನೆಟ್ ವರ್ಕ್ ಅಡಿ ಬರಲಿದ್ದಾರೆ.
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ, ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಅತ್ಯಂತ ವೇಗದಲ್ಲಿ ವಿಸ್ತರಿಸಿಕೊಳ್ಳುತ್ತಿದೆ. ಬೆಲೆ ಸಮರದ ಮೂಲಕ ಎದುರಾಳಿ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನಿಡಿದೆ. ಇದಕ್ಕೆ ಪ್ರತಿಯಾಗಿ ಏರ್ ಟೆಲ್ ಮತ್ತು ಟಾಟಾ ಟೆಲಿ ಸರ್ವೀಸ್ ವಿಲೀನವು ಭಾರತ ದೂರ ಸಂಪರ್ಕ ಮಾರುಕಟ್ಟೆಯಲ್ಲಿ ಒಂದು ಮಹತ್ವದ ವಿದ್ಯಮಾನವಾಗಲಿದೆ.
‘ಈ ವಿಲೀನ ಪ್ರಕ್ರಿಯೆಯಿಂದ ಮಾರುಕಟ್ಟೆಯಲ್ಲಿನ ನಮ್ಮ ಪಾಲು ಹೆಚ್ಚಲಿದೆ’ ಎಂದು ಭಾರ್ತಿ ಏರ್ ಟೆಲ್ ನ ಅಧ್ಯಕ್ಷ ಸುನೀಲ್ ಭಾರ್ತಿ ಪ್ರತಿಕ್ರಿಯಿಸಿದ್ದಾರೆ. ‘ಭಾರ್ತಿ ಏರ್‌ಟೆಲ್ ಜತೆಗಿನ ಈ ಒಪ್ಪಂದವು ಟಾಟಾ ಸಮೂಹ ಮತ್ತು ಅದರ ಪಾಲುದಾರರ ಪಾಲಿಗೆ ಉತ್ತಮ ಪರಿಹಾರವಾಗಿದೆ’ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಹೇಳಿದ್ದಾರೆ.
ಏರ್ ಟೆಲ್ ನ ಪ್ರತಿಸ್ಪರ್ಧಿ ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲರ್ ಸಹ ವಿಲೀನಗೊಳ್ಳುವುದಾಗಿ ಇದಾಗಲೇ ಘೋಷಣೆ ಮಾಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Tata TeleservicesReliance Jioರಿಲಯನ್ಸ್ ಜಿಯೊBharti Airtel LtdIdea-Vodafone mergerಭಾರ್ತಿ ಏರ್ಟೆಲ್ ಲಿಮಿಟೆಡ್ಟಾಟಾ ಟೆಲಿಸರ್ವಿಸಸ್ಐಡಿಯಾ-ವೊಡಾಫೋನ್ ವಿಲೀನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


