ವಾಣಿಜ್ಯ

ಐಎಂಎಫ್ ಮುನ್ನೋಟದಲ್ಲಿ ಕುಗ್ಗಿದ ಭಾರತದ ಆರ್ಥಿಕ ಬೆಳವಣಿಗೆ, ಜಿಎಸ್ ಟಿ, ನೋಟು ನಿಷೇಧ ಕಾರಣ!

ಭಾರತದ 2017 ನೇ ಸಾಲಿನ ಆರ್ಥಿಕ ಬೆಳವಣಿಗೆಯನ್ನು ಐಎಂಎಫ್ ಶೇ.6.7 ಕ್ಕೆ ಇಳಿಕೆ ಮಾಡಿದ್ದು, ಏಪ್ರಿಲ್ ಹಾಗೂ ಜುಲೈ ತಿಂಗಳ ಮುನ್ನೋಟದಲ್ಲಿ ದಾಖಲಾಗಿದ್ದಕ್ಕಿಂತ ಶೇ.0.5 ರಷ್ಟು ಕಡಿಮೆ ಮಾಡಿದೆ.

ಐಎಂಎಫ್ ಮುನ್ನೋಟದಲ್ಲಿ ಕುಗ್ಗಿದ ಭಾರತದ ಆರ್ಥಿಕ ಬೆಳವಣಿಗೆ, ಜಿಎಸ್ ಟಿ, ನೋಟು ನಿಷೇಧ ಕಾರಣ!
ಐಎಂಎಫ್
Published On :
ವಾಷಿಂಗ್ ಟನ್: ಭಾರತದ 2017 ನೇ ಸಾಲಿನ ಆರ್ಥಿಕ ಬೆಳವಣಿಗೆಯನ್ನು ಐಎಂಎಫ್ ಶೇ.6.7 ಕ್ಕೆ ಇಳಿಕೆ ಮಾಡಿದ್ದು, ಏಪ್ರಿಲ್ ಹಾಗೂ ಜುಲೈ ತಿಂಗಳ ಮುನ್ನೋಟದಲ್ಲಿ ದಾಖಲಾಗಿದ್ದಕ್ಕಿಂತ ಶೇ.0.5 ರಷ್ಟು ಕಡಿಮೆ ಮಾಡಿದೆ. 
ಬೆಳವಣಿಗೆ ದರ ಕುಗ್ಗಲು ನೋಟು ನಿಷೇಧ ಹಾಗೂ ಜಿಎಸ್ ಟಿ ಜಾರಿಯನ್ನು ಐಎಂಎಫ್ ಕಾರಣವಾಗಿ ನೀಡಿದೆ. ಇನ್ನು 2018 ರ ಆರ್ಥಿಕ ಬೆಳವಣಿಗೆ ಮುನ್ನೋಟದಲ್ಲಿಯೂ ಐಎಂಎಫ್ ಭಾರತದ ಬೆಳವಣಿಗೆ ದರವನ್ನು ಏಪ್ರಿಲ್, ಜುಲೈ ನಲ್ಲಿದ್ದ ಮುನ್ನೋಟಕ್ಕಿಂತ ಶೇ.0.3 ರಷ್ಟು ಕಡಿಮೆಗೊಳಿಸಿದ್ದು 2018 ರಲ್ಲಿ ಶೇ.7.4 ರಷ್ಟಿರಲಿದೆ ಎಂದು ಅಂದಾಜಿಸಿದೆ. 
2016 ರಲ್ಲಿ ಭಾರತದ ಬೆಳವಣಿಗೆ ದರ ಶೇ.7.1 ರಷ್ಟಿತ್ತು, ಏಪ್ರಿಲ್ ವರದಿಗಿಂತ ಶೇ.0.3 ರಷ್ಟು ಏರಿಕೆಯಾಗಿತ್ತು. ನೋಟು ನಿಷೇಧ ಹಾಗೂ ಜಿಎಸ್ ಟಿ ಜಾರಿಯ ನಂತರ ಉಂಟಾದ ಅನಿಶ್ಚಿತತೆ ನಂತರದ ಬೆಳವಣಿಗೆ ದರದ ಮೇಲೆ ಪರಿಣಾಮ ಬೀರಿದೆ ಎಂದು ಐಎಂಎಎಫ್ ತನ್ನ ವಿಶ್ವ ಆರ್ಥಿಕ ಮುನ್ನೋಟದಲ್ಲಿ ತಿಳಿಸಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.