ಪಿಎಫ್ ಪಿಂಚಣಿದಾರರು ಡಿಜಿಟಲ್ ಜೀವನ ಪ್ರಮಾಣಪತ್ರ ಸಲ್ಲಿಸಲು ಕೋರಿಕೆ
ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ, ಬೆಂಗಳೂರು, ಇವರ ಆಡಳಿತ ವ್ಯಾಪ್ತಿಗೆ ಒಳಪಡುವ ನೌಕರರ ಪಿಂಚಣಿ ಯೋಜನೆ 1995 ಮತ್ತು ನೌಕರರ ಕುಟುಂಬ ಪಿಂಚಣಿ ನಿಧಿ ಯೋಜನೆ 1971ರ ಅಡಿ ಬರುವ ಪಿಂಚಣಿದಾರರು...

ಬೆಂಗಳೂರು: ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ, ಬೆಂಗಳೂರು, ಇವರ ಆಡಳಿತ ವ್ಯಾಪ್ತಿಗೆ ಒಳಪಡುವ ನೌಕರರ ಪಿಂಚಣಿ ಯೋಜನೆ 1995 ಮತ್ತು ನೌಕರರ ಕುಟುಂಬ ಪಿಂಚಣಿ ನಿಧಿ ಯೋಜನೆ 1971ರ ಅಡಿ ಬರುವ ಪಿಂಚಣಿದಾರರು ತಮ್ಮ ಡಿಜಿಟಲ್ ಜೀವನ ಪ್ರಮಾಣಪತ್ರ / ಜೀವನ್ ಪ್ರಮಾಣ್ ಸಲ್ಲಿಸಬೇಕು.
ಡಿಜಿಟಲ್ ಜೀವನ ಪ್ರಮಾಣಪತ್ರ / ಜೀವನ್ ಪ್ರಮಾಣ್ ಅಪ್ ಡೇಟ್ ಮಾಡಲು ನಿಮ್ಮ ಪಿಪಿಒ ನಂಬರ್, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಮತ್ತು ಮೊಬೈಲ್ ನೊಂದಿಗೆ 31.12.2017 ದಿನಾಂಕದೊಳಗೆ ನಿಮ್ಮ ಪಿಂಚಣಿ ವಿತರಿಸುವ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ.
ಡಿಜಿಟಲ್ ಜೀವನ ಪ್ರಮಾಣಪತ್ರ ಸಲ್ಲಿಸದಿದ್ದರೆ ಜನವರಿ 2018ರಿಂದ ಅನ್ವಯವಾಗುವಂತೆ ಪಿಂಚಣಿಯನ್ನು ನಿಲ್ಲಿಸಲಾಗುವುದು. ಆದ್ದರಿಂದ ಪಿಂಚಣಿದಾರರು ತಮ್ಮ ಈಪಿಎಸ್ ಪಿಂಚಣಿ ಪಡೆಯಲು ಸ್ವಹಿತಾಸಕ್ತಿಯಿಂದ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗಿ ಕೋರಲಾಗಿದೆ.
ಡಿಜಿಟಲ್ ಜೀವನ ಪ್ರಮಾಣಪತ್ರ ಅಪ್ ಡೇಟ್ ಮಾಡುವ ಬಗೆಗಿನ ಯಾವುದೇ ಮಾಹಿತಿಗೆ ದಯವಿಟ್ಟು ಈ ಕೆಳಗಿನ ಬ್ಯಾಂಕ್ ಬ್ರ್ಯಾಂಚ್ ಗಳನ್ನು ಸಂಪರ್ಕಿಸಿ.

ಡಿಜಿಟಲ್ ಜೀವನ ಪ್ರಮಾಣಪತ್ರ ಅಪ್ ಡೇಟ್ ಮಾಡುವ ಬಗೆಗಿನ ಯಾವುದೇ ಕುಂದುಕೊರತೆಗಳನ್ನು ನಮ್ಮ ಗಮನಕ್ಕೆ ತರಲು ಇಲ್ಲಿಗೆ ಮೇಲ್ ಮಾಡಿ ro.bangalore@epfindia.gov.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


