ಜಿಎಸ್ ಟಿ ಜಾರಿಯಿಂದ ಮನರಂಜನಾ ಸೇವೆ ತೆರಿಗೆ ಅಗ್ಗ
ಜಿಎಸ್ ಟಿ ಜಾರಿಯಾದ ನಂತರ ಸ್ಮಾರ್ಟ್ ಫೋನ್ ಹಾಗೂ ವೈದ್ಯಕೀಯ ಉಪಕರಣಗಳ ಬೆಲೆ ಇಳಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು. ಈಗ ಜಿಎಸ್ ಟಿ ಜಾರಿಯಿಂದ ಮನರಂಜನಾ ಸೇವೆ ತೆರಿಗೆ ಸಹ ಕಡಿಮೆಯಾಗಲಿದೆ.

Published On :
ನವದೆಹಲಿ: ಜುಲೈ 1 ರಿಂದ ಜಿಎಸ್ ಟಿ ಜಾರಿಯಾಗಲಿದ್ದು, ಯಾವ್ಯಾವ ವಿಭಾಗಗಳಿಗೆ ಎಷ್ಟು ತೆರಿಗೆ ಇರಲಿದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಜಿಎಸ್ ಟಿ ಜಾರಿಯಾದ ನಂತರ ಸ್ಮಾರ್ಟ್ ಫೋನ್ ಹಾಗೂ ವೈದ್ಯಕೀಯ ಉಪಕರಣಗಳ ಬೆಲೆ ಇಳಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು. ಈಗ ಜಿಎಸ್ ಟಿ ಜಾರಿಯಿಂದ ಮನರಂಜನಾ ಸೇವೆ ತೆರಿಗೆ ಸಹ ಕಡಿಮೆಯಾಗಲಿದೆ.
ಮನರಂಜನೆ ಹಾಗು ಅಮ್ಯೂಸ್ಮೆಂಟ್ ಗಳ ಮೇಲಿನ ತೆರಿಗೆ ಜಿಎಸ್ ಟಿ ಜಾರಿಯ ನಂತರ ಕಡಿಮೆಯಾಗಲಿದ್ದು, ಶುಲ್ಕವೂ ಕಡಿಮೆಯಾಗಲಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆ ನೀಡಿದೆ. ಸಿನಿಮೆಟೋಗ್ರಾಫಿ ಫಿಲ್ಮ್ ಗಳಿಗೆ ಕೆಲವು ರಾಜ್ಯಗಳಲ್ಲಿ ಶೇ.100 ರಷ್ಟು ತೆರಿಗೆ ದರ ಇದ್ದು, ಜಿಎಸ್ ಟಿ ಇದನ್ನು ಶೇ.28 ಕ್ಕೆ ಇಳಿಕೆ ಮಾಡಲಿದೆ. ಸರ್ಕಸ್, ಭಾರತೀಯ ಶಾಸ್ತ್ರೀಯ ನೃತ್ಯ ಸೇರಿದಂತೆ ವಿವಿಧ ಮನರಂಜನೆಗಳಿಗೆ ಶೇ.18 ರಷ್ಟು ತೆರಿಗೆ ವಿಧಿಸಲಾಗಿದೆ ಎಂದು ಹಣಕಾಸು ಇಲಾಖೆಯ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


