ವಾಣಿಜ್ಯ

ಭಾರತದಲ್ಲಿ ಕಾರು ಮಾರಾಟ ನಿಲ್ಲಿಸಿದ ಜನರಲ್ ಮೋಟಾರ್ಸ್

ಈ ವರ್ಷದ ಅಂತ್ಯಕ್ಕೆ ಜನರಲ್ ಮೋಟಾರ್ಸ್ ಕೊ ಭಾರತದಲ್ಲಿ ಕಾರುಗಳ ಮಾರಾಟವನ್ನು...

ಭಾರತದಲ್ಲಿ ಕಾರು ಮಾರಾಟ ನಿಲ್ಲಿಸಿದ ಜನರಲ್ ಮೋಟಾರ್ಸ್
ಸಾಂದರ್ಭಿಕ ಚಿತ್ರ
Published On :
ಬೀಜಿಂಗ್: ಈ ವರ್ಷದ ಅಂತ್ಯಕ್ಕೆ ಜನರಲ್ ಮೋಟಾರ್ಸ್ ಕೊ ಭಾರತದಲ್ಲಿ ಕಾರುಗಳ ಮಾರಾಟವನ್ನು ನಿಲ್ಲಿಸಲಿದೆ.  ಭಾರತದಲ್ಲಿ ಸುಮಾರು ಎರಡು ದಶಕಗಳ ಕಾಲ ತೀವ್ರ ಸ್ಪರ್ಧೆಯಿರುವ ಕಾರು ಮಾರುಕಟ್ಟೆ ಜಗತ್ತಿನಲ್ಲಿ ಹೋರಾಟ ನಡೆಸಿದೆ. ಪ್ರಯಾಣಿಕರ ಕಾರು ಮಾರಾಟದಲ್ಲಿ ಜನರಲ್ ಮೋಟಾರ್ಸ್ ಶೇಕಡಾ 1ಕ್ಕಿಂತ ಕಡಿಮೆ ಪಾಲು ಹೊಂದಿದೆ.
ಇಂದು ಡೆಟ್ರಾಯ್ಟ್ ಕಾರು ತಯಾರಿಕಾ ಕಂಪೆನಿ ತನ್ನ ನಿರ್ಧಾರವನ್ನು ಪ್ರಕಟಿಸಿದೆ.  ದೇಶಿ ಕಾರು ತಯಾರಿಕಾ ಮಾರುಕಟ್ಟೆಗೆ ಭಾರತದ ಕಾರ್ಯತಂತ್ರಕ್ಕೆ ಇದರಿಂದ ಹೆಚ್ಚಿನ ಹೊಡೆತ ಬೀಳಲಿದೆ.
ಚೆವ್ರೊಲೆಟ್ ಬ್ರಾಂಡ್ ನ ಮಾರಾಟವನ್ನು ನಿಲ್ಲಿಸಲಾಗುವುದು ಎಂದು ಜನರಲ್ ಮೋಟಾರ್ಸ್ ಹೇಳಿದೆ. ಅದು ಭಾರತದಲ್ಲಿ ಚವ್ರೊ ಲೆಟ್ ಮಾದರಿಯನ್ನು ಮಾತ್ರ ಹೊಂದಿದೆ. ಆದರೆ ಭಾರತವನ್ನು ಸಂಪೂರ್ಣವಾಗಿ ತೊರೆಯಲು ಅದು ಯೋಚಿಸಿಲ್ಲ.
ಅದು ತನ್ನ ತಾಂತ್ರಿಕ ಕೇಂದ್ರದ ಕಾರ್ಯನಿರ್ವಹಣೆಗೆ ಬೆಂಗಳೂರಿನಲ್ಲಿ ಉಳಿಸಲು ಯೋಜನೆ ನಡೆಸಿದೆ. ಭಾರತದ ತಯಾರಿಕಾ ಘಟಕಗಳನ್ನು ರಫ್ತಿನ ಉದ್ದೇಶಗಳಿಗೆ ಮಾತ್ರ ಇಟ್ಟುಕೊಳ್ಳಲಿದೆ. ಮುಂಬೈಯಿಂದ 62 ಮೈಲಿ ದೂರದಲ್ಲಿ ತಲೆಗಾಂವ್ ನಲ್ಲಿ ಉತ್ಪಾದನಾ ನಿರ್ವಹಣೆ ಘಟಕವಿದೆ. ಗುಜರಾತ್ ನಲ್ಲಿರುವ ಹಲೊಲ್ ಘಟಕವನ್ನು ಚೀನಾಕ್ಕೆ ಅದರ ಜಂಟಿ ಸಾಹಸೋದ್ಯಮ ಪಾಲುದಾರ ಸೈಕ್ ಮೊಟಾರ್ ಕಾರ್ಪೊಗೆ ಮಾರಾಟ ಮಾಡಲು ಚಿಂತಿಸುತ್ತಿದೆ.
ಜನರಲ್ ಮೋಟಾರ್ಸ್ ಮುಖ್ಯವಾಗಿ ಮೆಕ್ಸಿಕೊ ಮತ್ತು ಲ್ಯಾಟಿನ್ ಅಮೆರಿಕಾಕ್ಕೆ ರಫ್ತು ಮಾಡುತ್ತಿದ್ದು ಮಾರ್ಚ್ 31ರ ವೇಳೆಗೆ ಮಾರಾಟದಲ್ಲಿ ದ್ವಿಗುಣಗೊಂಡು 70,969 ಆಗಿದೆ. ತಲೆಂಗಾಂವ್ ಘಟಕ 1,30,000 ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಪ್ರಧಾನ ಮಂತ್ರಿಯವರ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಜನರಲ್ ಮೋಟಾರ್ಸ್ ನ ಈ ನಿರ್ಧಾರ ಇತ್ತೀಚಿನ ಹೊಡೆತವೆನ್ನಬಹುದು. ಭಾರತವನ್ನು ಜಾಗತಿಕ ಉತ್ಪಾದನಾ ಶಕ್ತಿ ಕೇಂದ್ರವಾಗಿ ಮಾಡಬೇಕೆಂಬ ಉದ್ದೇಶಕ್ಕೆ ಇದರಿಂದ ಹಿನ್ನಡೆಯುಂಟಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.