ವಾಣಿಜ್ಯ

ಸಕಾರಾತ್ಮಕ ವಹಿವಾಟು; ಸೆನ್ಸೆಕ್ಸ್ 140 ಅಂಕಗಳ ಏರಿಕೆ, 9500 ಗಡಿಯತ್ತ ನಿಫ್ಟಿ

ಸೋಮವಾರವೂ ಭಾರತೀಯ ಷೇರುಮಾರುಕಟ್ಟೆ ಏರಿಕೆಯತ್ತ ಮುಖಮಾಡಿದ್ದು, ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 135 ಅಂಕಗಳ ಏರಿಕೆ ಕಂಡಿದೆ.

ಸಕಾರಾತ್ಮಕ ವಹಿವಾಟು; ಸೆನ್ಸೆಕ್ಸ್ 140 ಅಂಕಗಳ ಏರಿಕೆ, 9500 ಗಡಿಯತ್ತ ನಿಫ್ಟಿ
ಸಂಗ್ರಹ ಚಿತ್ರ
Published On :

ಮುಂಬೈ: ಸೋಮವಾರವೂ ಭಾರತೀಯ ಷೇರುಮಾರುಕಟ್ಟೆ ಏರಿಕೆಯತ್ತ ಮುಖಮಾಡಿದ್ದು, ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 135 ಅಂಕಗಳ ಏರಿಕೆ ಕಂಡಿದೆ.

135 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 30,324.90 ಅಂಕಗಳಿಗೆ ಏರಿಕೆಯಾಗಿದ್ದು, ನಿಫ್ಟಿ ಕೂಡ 42.10 ಅಂಕಗಳ ಏರಿಕೆಯೊಂದಿಗೆ 9,442 ಅಂಕಗಳಿಗೆ ಏರಿಕೆಯಾಗಿದೆ. ದಿನದ ಆರಂಭದಲ್ಲೇ 156 ಸೆನ್ಸೆಕ್ಸ್ 156 ಅಂಕಗಳ ಏರಿಕೆ  ಕಂಡಿತ್ತಾದರೂ ಬಳಿಕ 21 ಅಂಕಗಳ ಕುಸಿತ ಕಂಡಿತ್ತು. ಕಳೆದ ವಾರಾಂತ್ಯದಲ್ಲಿ ನಡೆದ ಸೈಬರ್ ದಾಳಿ ಹಾಗೂ ಉತ್ತರ ಕೊರಿಯಾದ ಅಣ್ವಸ್ತ್ರ ಸಹಿತ ದೂರಗಾಮಿ ಕ್ಷಿಪಣಿ ಪರೀಕ್ಷೆ ಭಾರತೀಯ ಷೇರುಮಾರುಕಟ್ಟೆ ಮೇಲೆ ಪ್ರಭಾವ  ಬೀರಬಹುದು ಎಂದು ಅಂದಾಜಿಸಲಾಗಿತ್ತು.

ಆದರೆ ಭಾರತೀಯ ಷೇರು ಮಾರುಕಟ್ಟೆ ಎಂದಿನಂತ ವಹಿವಾಟು ನಡೆಸಿದೆ. ಇಂದಿನ ವಹಿವಾಟಿನಲ್ಲಿ ಪ್ರಮುಖವಾಗಿ ಬ್ಯಾಂಕಿಂಗ್, ಉಕ್ಕು ಕ್ಷೇತ್ರಗಳು ಲಾಭಾಂಶ ಕಂಡಿದ್ದು, ಐಸಿಐಸಿಐ ಬ್ಯಾಂಕ್ ಷೇರುಗಳ ಮೌಲ್ಯ ಗರಿಷ್ಠ  ಶೇ2.02ರಷ್ಟು ಏರಿಕೆ ಕಂಡಿದೆ. ಅಂತೆಯೇ ಟಾಟಾ ಸ್ಟೀಲ್ ಷೇರುಗಳ ಮೌಲ್ಯ ಶೇ3.96ರಷ್ಚು ಏರಿಕೆಯಾಗಿದ್ದು, ಡಾ.ರೆಡ್ಡೀಸ್ ಲ್ಯಾಬ್ ಸಂಸ್ಥೆಯ ಷೇರುಗಳ ಮೌಲ್ಯ ಶೇ.1.81ರಷ್ಟು ಏರಿಕೆ ಕಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.