ಎರಡು ಸಂಸ್ಥೆಗಳ ಗರಿಷ್ಟ ಷೇರುಗಳನ್ನು ಕೊಳ್ಳಲು ಮುಂದಾದ ಕಾಫಿ ಡೇ
ಕೆಫೆ ಕಾಫಿ ಡೇ ಹೆಸರಿನಲ್ಲಿ ಹಲವು ಕಾಫಿ ಮಾರಾಟ ಅಂಗಡಿಗಳನ್ನು ನಡೆಸುವ ಕಾಫಿ ಡೇ ಎಂಟರ್ ಪ್ರೈಸಸ್, ತನ್ನ ಅಂಗಸಂಸ್ಥೆ ಸಿಕಲ್ ಲಾಜಿಸ್ಟಿಕ್ಸ್ ಸಾಗಾಣೆ, ದಾಸ್ತಾನು ಮತ್ತು ವಿತರಣೆ ವ್ಯವಹಾರ ನಡೆಸುವ
Published On :
ನವದೆಹಲಿ: ಕೆಫೆ ಕಾಫಿ ಡೇ ಹೆಸರಿನಲ್ಲಿ ಹಲವು ಕಾಫಿ ಮಾರಾಟ ಅಂಗಡಿಗಳನ್ನು ನಡೆಸುವ ಕಾಫಿ ಡೇ ಎಂಟರ್ ಪ್ರೈಸಸ್, ತನ್ನ ಅಂಗಸಂಸ್ಥೆ ಸಿಕಲ್ ಲಾಜಿಸ್ಟಿಕ್ಸ್ ಸಾಗಾಣೆ, ದಾಸ್ತಾನು ಮತ್ತು ವಿತರಣೆ ವ್ಯವಹಾರ ನಡೆಸುವ ಎರಡು ಸಣ್ಣ ಮಟ್ಟದ ಸಂಸ್ಥೆಗಳ ಗರಿಷ್ಟ ಷೇರುಗಳನ್ನು ಕೊಳ್ಳಲಿದೆ ಎಂದು ತಿಳಿಸಿದೆ.
"ನಮ್ಮ ಸಂಸ್ಥೆಯ ಅಂಗ ಸಂಸ್ಥೆಯಾದ ಸಿಕಲ್ ಲಾಜಿಸ್ಟಿಕ್ಸ್ ಲಿಮಿಟೆಡ್, ೪೦ ಕೋಟಿ ರೂ ವರಮಾನ ಇರುವ ಎಕ್ಸ್ಪ್ರೆಸ್ ಲಾಜಿಸ್ಟಿಕ್ಸ್ ನ ಗರಿಷ್ಟ ಷೇರುಗಳನ್ನು ಕೊಳ್ಳಲು ಯೋಜನೆಗೆ ಚಾಲನೆ ನೀಡಲು ಒಪ್ಪಿಗೆ ಸೂಚಿಸದೆ" ಎಂದು ಕಾಫಿ ಡೇ ಬಿ ಎಸ್ ಇ ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ.
"ಹಾಗೆಯೇ ೨೦ ಕೋಟಿ ರೂ ವರಮಾನ ಇರುವ ಲಾಜಿಸ್ಟಿಕ್ಸ್, ದಾಸ್ತಾನು ಮತ್ತು ವಿತರಣೆ ವ್ಯವಹಾರ ನಡೆಸುವ ಸಂಸ್ಥೆಯೊಂದರ ಗರಿಷ್ಟ ಷೇರುಗಳನ್ನು ಕೊಳ್ಳುವ ಯೋಜನೆಗೆ ಕೂಡ ನಿರ್ದೇಶಕರ ಸಮಿತಿ ಒಪ್ಪಿಗೆ ಸೂಚಿಸದೆ" ಎಂದು ಸಂಸ್ಥೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

