ವಾಣಿಜ್ಯ

2018 ರ ವೇಳೆಗೆ ಶೇ.7.5 ರಷ್ಟು ಬೆಳವಣಿಗೆ ದರ ದಾಟಲಿರುವ ಭಾರತದ ಜಿಡಿಪಿ: ವಿಶ್ವಸಂಸ್ಥೆ ವರದಿ

ಭಾರತದ ಆರ್ಥಿಕ ಬೆಳವಣಿಗೆ ದರ 2018 ರ ವೇಳೆಗೆ ಶೇ.7.5 ರಷ್ಟಾಗಲಿದೆ ಎಂದು ಏಷ್ಯಾ ಹಾಗೂ ಪೆಸಿಫಿಕ್ ನ ವಿಶ್ವಸಂಸ್ಥೆ ಆರ್ಥಿಕ ಹಾಗೂ ಸಾಮಾಜಿಕ ಆಯೋಗ (ಇಎಸ್ ಸಿಎಪಿ) ವರದಿ ಹೇಳಿದೆ.

2018 ರ ವೇಳೆಗೆ ಶೇ.7.5 ರಷ್ಟು ಬೆಳವಣಿಗೆ ದರ ದಾಟಲಿರುವ ಭಾರತದ ಜಿಡಿಪಿ: ವಿಶ್ವಸಂಸ್ಥೆ ವರದಿ
ಭಾರತೀಯ ಆರ್ಥಿಕತೆ
Published On :
ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ ದರ 2018 ರ ವೇಳೆಗೆ ಶೇ.7.5 ರಷ್ಟಾಗಲಿದೆ ಎಂದು ಏಷ್ಯಾ ಹಾಗೂ ಪೆಸಿಫಿಕ್ ನ ವಿಶ್ವಸಂಸ್ಥೆ ಆರ್ಥಿಕ ಹಾಗೂ ಸಾಮಾಜಿಕ ಆಯೋಗ (ಇಎಸ್ ಸಿಎಪಿ) ವರದಿ ಹೇಳಿದೆ. 
2017 ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.7.1 ರಷ್ಟಿದೆ. ಹೆಚ್ಚಿದ ಮೂಲಸೌಕರ್ಯ ಖರ್ಚುಗಳಿಂದ ಹಾಗೂ ಖಾಸಗಿ ಮತ್ತು ಸಾರ್ವಜನಿಕ ಬಳಕೆ ಹೆಚ್ಚಾಗಿರುವುದರಿಂದ ಮುಂದಿನ ವರ್ಷಕ್ಕೆ ಜಿಡಿಪಿ ದರ ಶೇ.7.5 ರಷ್ಟಾಗಲಿದೆ ಎಂದು ವರದಿ ಹೇಳಿದೆ. 
ಕಳೆದ ತಿಂಗಳು ಭಾರತದ ಜಿಡಿಪಿ ಬೆಳವಣಿಗೆ ಬಗ್ಗೆ ಅಂದಾಜು ಮಂಡಿಸಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಹ ಇದೇ ರೀತಿಯ ವಿಶ್ವಾಸ ವ್ಯಕ್ತಪಡಿಸಿ, 2017-18 ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ.7.7 ರಷ್ಟಾಗಲಿದೆ ಎಂದಿತ್ತು. ಇನ್ನು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸಹ ಮುಂದಿನ ವರ್ಷದ ಜಿಡಿಪಿ ಬೆಳವಣಿಗೆ ದರವನ್ನು ಶೇ.7.6 ಕ್ಕೆ ಅಂದಾಜಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.