ವಾಣಿಜ್ಯ

ರಾಜ್ಯ ಜಿಎಸ್ ಟಿ ಮಸೂದೆಗೆ ಏಪ್ರಿಲ್-ಮೇ ನಲ್ಲಿ 8 ರಾಜ್ಯಗಳಿಂದ ಅನುಮೋದನೆ: ಹಣಕಾಸು ಸಚಿವಾಲಯ

ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 8 ರಾಜ್ಯಗಳ ವಿಧಾನಸಭೆಗಳು ಸರಕು ಮತ್ತು ಸೇವಾ ಮಸೂದೆ(ಜಿಎಸ್ ಟಿ) ಗೆ ಅನುಮೋದನೆ ನೀಡಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ರಾಜ್ಯ ಜಿಎಸ್ ಟಿ ಮಸೂದೆಗೆ ಏಪ್ರಿಲ್-ಮೇ ನಲ್ಲಿ 8 ರಾಜ್ಯಗಳಿಂದ ಅನುಮೋದನೆ: ಹಣಕಾಸು ಸಚಿವಾಲಯ
ಹಣಕಾಸು ಸಚಿವಾಲಯ
Published On :
ನವದೆಹಲಿ: ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 8 ರಾಜ್ಯಗಳ ವಿಧಾನಸಭೆಗಳು ಸರಕು ಮತ್ತು ಸೇವಾ ಮಸೂದೆ(ಜಿಎಸ್ ಟಿ) ಗೆ ಅನುಮೋದನೆ ನೀಡಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. 
ಏ.9 ರಂದು ತೆಲಂಗಾಣ ಸರ್ಕಾರ, ಏ.24 ರಂದು ಬಿಹಾರ, ಏ.26 ರಂದು ರಾಜಸ್ಥಾನ, ಏ.27 ರಂದು ಜಾರ್ಖಂಡ್, ಏ.28 ರಂದು ಛತ್ತೀಸ್ ಗಢ,  ಮೇ.2 ರಂದು ಉತ್ತರಾಖಂಡ್, ಮೇ.3 ರಂದು ಮಧ್ಯಪ್ರದೇಶ ಸರ್ಕಾರ, ಮೇ.4 ರಂದು ಹರ್ಯಾಣ ಸರ್ಕಾರ ಜಿಎಸ್ ಟಿ ಮಸೂದೆಗಳನ್ನು ಅಂಗೀಕರಿಸಿವೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಜಿಎಸ್ ಟಿ ಮಸೂದೆಗೆ ಸಂಬಂಧಿಸಿದ 4 ಪೂರಕ ಮಸೂದೆಗಳಿಗೆ ಅರುಣ್ ಜೇಟ್ಲಿ ನೇತೃತ್ವದ ಸಮಿತಿ ಮಾರ್ಚ್.16 ರಂದು ಅನುಮೋದನೆ ನೀಡಿತ್ತು. ತೆರಿಗೆ ದರಗಳನ್ನು ನಿಗದಿಪಡಿಸಲು ಮೇ.18-19 ರಂದು ಶ್ರೀನಗರದಲ್ಲಿ ಅರುಣ್ ಜೇಟ್ಲಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು ತೆರಿಗೆ ದರಗಳು ಅಂತಿಮಗೊಂಡ ನಂತರ ಜುಲೈ 1 ರಿಂದ ಜಿಎಸ್ ಟಿ ಜಾರಿಗೆ ಬರಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.