ವಾಣಿಜ್ಯ

2 ಬಿಲಿಯನ್ ದಾಟಿದ ಬಳಕೆದಾರರ ಸಂಖ್ಯೆ: ಫೇಸ್ ಬುಕ್ ಲಾಭದಲ್ಲಿ ಏರಿಕೆ

ಫೇಸ್ ಬುಕ್ ಬಳಕೆದಾರರ ಸಂಖ್ಯೆ 2 ಬಿಲಿಯನ್ ದಾಟಿದ್ದು, ತ್ರೈಮಾಸಿಕ ವರದಿಯಲ್ಲಿ ಸಾಮಾಜಿಕ ಜಾಲತಾಣ ಸಂಸ್ಥೆಯ ಆದಾಯ 3 ಬಿಲಿಯನ್ ಡಾಲರ್ ದಾಟಿದೆ.

2 ಬಿಲಿಯನ್ ದಾಟಿದ ಬಳಕೆದಾರರ ಸಂಖ್ಯೆ: ಫೇಸ್ ಬುಕ್ ಲಾಭದಲ್ಲಿ ಏರಿಕೆ
ಫೇಸ್ ಬುಕ್
Published On :
ಸ್ಯಾನ್ ಫ್ರಾನ್ಸಿಸ್ಕೊ: ಫೇಸ್ ಬುಕ್ ಬಳಕೆದಾರರ ಸಂಖ್ಯೆ 2 ಬಿಲಿಯನ್ ದಾಟಿದ್ದು, ತ್ರೈಮಾಸಿಕ ವರದಿಯಲ್ಲಿ ಸಾಮಾಜಿಕ ಜಾಲತಾಣ ಸಂಸ್ಥೆಯ ಆದಾಯ 3 ಬಿಲಿಯನ್ ಡಾಲರ್ ದಾಟಿದೆ. 
ವರ್ಷದ ಮೊದಲ ಮೂರು ತಿಂಗಳಲ್ಲಿ ಒಟ್ಟು 8.03 ಬಿಲಿಯನ್ ಡಾಲರ್ ಗಳಿಕೆಯಲ್ಲಿ ಸಂಸ್ಥೆಗೆ 3.06 ಬಿಲಿಯನ್ ಡಾಲರ್ ಆದಾಯ ಬಂದಿದೆ. ಕಳೆದ ವರ್ಷದ ಶೇ.49 ರಷ್ಟು ಆದಾಯಕ್ಕೆ ಹೋಲಿಸಿದರೆ ಈ ವರ್ಷ ಶೇ.79 ರಷ್ಟು ಆದಾಯ ಬಂದಿದೆ ಎಂದು ಫೇಸ್ ಬುಕ್ ಹೇಳಿದೆ. 
ಪ್ರತಿ ತಿಂಗಳು ಫೇಸ್ ಬುಕ್ ಬಳಸುವವರ ಸಂಖ್ಯೆ ಶೇ.17 ರಷ್ಟು ಏರಿಕೆಯಾಗಿದ್ದು, 1.94 ಬಿಲಿಯನ್ ಬಳಕೆದಾರರಿದ್ದು 2017 ವರ್ಷಕ್ಕೆ ಶುಭಾರಂಭ ದೊರೆತಿದೆ ಎಂದು ಫೇಸ್ ಬುಕ್ ನ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಹೇಳಿಕೆ ನೀಡಿದ್ದಾರೆ. 
ಬಲವಾದ ಜಾಗತಿಕ ಸಮುದಾಯಕ್ಕಾಗಿ ಟೂಲ್ ಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಫೇಸ್ ಬುಕ್ ಆದಾಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿತ್ತು. ಆದರೆ ಷೇರುಗಳಲ್ಲಿ ಕುಸಿತ ಕಂಡಿದೆ. ಇದರ ಹೊರತಾಗಿಯೂ ಸಹ ಫೇಸ್ ಬುಕ್ ನ ಬೆಳವಣಿಗೆ ಸ್ಥಿರವಾಗಿರಲಿದ್ದು, ಡಿಜಿಟಲ್ ಜಾಹಿರಾತಿನಿಂದ 36.29 ಬಿಲಿಯನ್ ಡಾಲರ್ ನಷ್ಟು ಆದಾಯ ಗಳಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.