ವಾಣಿಜ್ಯ

ಜೀವ ವಿಮೆ ಹೊರತಾದ ಇತರ ವಿಮೆಗಳ ಕಂತು ಏ.1 ರಿಂದ ದುಬಾರಿ

ಏಜೆಂಟ್ ಗಳ ಕಮಿಷನ್ ನ್ನು ಪರಿಷ್ಕರಣೆ ಮಾಡುವ ವಿಮೆ ಸಂಸ್ಥೆಗಳ ಪ್ರಸ್ತಾವನೆಗೆ ಭಾರತೀಯ ವಿಮೆ ಮತ್ತು ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದೆ.

ಜೀವ ವಿಮೆ ಹೊರತಾದ ಇತರ ವಿಮೆಗಳ ಕಂತು ಏ.1 ರಿಂದ ದುಬಾರಿ
ಜೀವ ವಿಮೆ ಹೊರತಾದ ವಿಮೆ ಕಂತು ಏ.1 ರಿಂದ ದುಬಾರಿ
Published On :
ನವದೆಹಲಿ: ಏಜೆಂಟ್ ಗಳ ಕಮಿಷನ್ ನ್ನು ಪರಿಷ್ಕರಣೆ ಮಾಡುವ ವಿಮೆ ಸಂಸ್ಥೆಗಳ ಪ್ರಸ್ತಾವನೆಗೆ ಭಾರತೀಯ ವಿಮೆ ಮತ್ತು ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದೆ. ತತ್ಪರಿಣಾಮವಾಗಿ ಕಾರು, ದ್ವಿಚಕ್ರ ವಾಹನ, ಆರೋಗ್ಯ ವಿಮೆ ಸೇರಿದಂತೆ ಜೀವ ವಿಮೆ ಹೊರತಾದ ಎಲ್ಲಾ ರೀತಿತ ವಿಮೆಗಳ ಕಂತು ಏ.1 ರಿಂದ ಏರಿಕೆಯಾಗಲಿದೆ. 
ಈಗಿರುವ ದರಕ್ಕಿಂತ ಗರಿಷ್ಠ ಶೇ.5 ರಷ್ಟು ಏರಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಪರಿಷ್ಕೃತ ದರ ಏಪ್ರಿಲ್.1 ರಿಂದ ಜಾರಿಗೆ ಬರಲಿದೆ. ಐಆರ್ ಡಿಐ ನಿಯಮಗಳು ಏಪ್ರಿಲ್ 1 2017 ರಿಂದ ಜಾರಿಗೆ ಬರಲಿದ್ದು, ಏಜೆಂಟ್ ಗಳಿಗೆ  ರಿವಾರ್ಡ್ ವ್ಯವಸ್ಥೆಯನ್ನು ಸಹ ಪರಿಚಯಿಸಲಾಗುತ್ತಿದೆ. 
ಕಮಿಷನ್ ನ್ನು ಪರಿಷ್ಕರಣೆ ಮಾಡುತ್ತಿರುವುದರಿಂದ ವಿಮೆ ಮಾಡಿಸಿರುವವ ವಿಮೆಯ ಕಂತಿನ ಮೊತ್ತ ಏ.1 ರಿಂದ ಗರಿಷ್ಠ ಶೇ. 5 ರಷ್ಟು ದುಬಾರಿಯಾಗಲಿದೆ ಎಂದು ಐಆರ್ ಡಿಐ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.