ವಾಣಿಜ್ಯ

100 ರು. ವರೆಗಿನ ತೆರಿಗೆ ಬಾಕಿ ವಜಾ: ಕೇಂದ್ರ ಸಚಿವ ಸಂತೋಷ್ ಗಂಗ್ವಾರ್

ಮಹತ್ವದ ಬೆಳವಣಿಗೆಯಲ್ಲಿ 100 ರೂಪಾಯಿ ವರೆಗಿನ ತೆರಿಗೆ ಬಾಕಿಯನ್ನು ವಜಾ ಮಾಡುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.

100 ರು. ವರೆಗಿನ ತೆರಿಗೆ ಬಾಕಿ ವಜಾ: ಕೇಂದ್ರ ಸಚಿವ ಸಂತೋಷ್ ಗಂಗ್ವಾರ್
ಕೇಂದ್ರ ಸಚಿವ ಸಂತೋಷ್ ಗಂಗ್ವಾರ್
Published On :

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ 100 ರೂಪಾಯಿ ವರೆಗಿನ ತೆರಿಗೆ ಬಾಕಿಯನ್ನು ವಜಾ ಮಾಡುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.

ಶುಕ್ರವಾರ ಈ ಬಗ್ಗೆ ಲೋಕಸಭೆ ಲಿಖಿತ ಉತ್ತರ ನೀಡಿದ ಕೇಂದ್ರ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರು, 100 ರು.ವರೆಗಿನ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಮಾರು 21.54 ಲಕ್ಷ ತೆರಿಗೆ ಪಾವತಿದಾರರ ಬಾಕಿಯನ್ನು  ಕೇಂದ್ರ ಸರ್ಕಾರ ವಜಾಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಿದರು. ಈ ಖಾತೆಗಳ ನಿರ್ವಹಣೆ ದುಬಾರಿ ಮತ್ತು ಕಷ್ಟಸಾಧ್ಯವಾಗುತ್ತಿರುವುದರಿಂದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು. ಈ ರೀತಿ ತೆರಿಗೆ  ವಜಾ ಮಾಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಬೃಹತ್ ನಷ್ಟವೇನೂ ಆಗುವದಿಲ್ಲ. ಕೇವಲ 6.4 ಕೋಟಿ ಹಣ ಖೋತಾ ಆಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು  ಸದನಕ್ಕೆ ಮಾಹಿತಿ ನೀಡಿದರು.

ಈ ಖಾತೆಗಳ ತೆರಿಗೆ ಬಾಕಿ ವಜಾ ಮಾಡುಪುದರಿಂದ ಹೆಚ್ಚಿನ ಪ್ರಮಾಣದ ತೆರಿಗೆ ಬಾಕಿ ಉಳಿಸಿಕೊಂಡಿರುವ ಖಾತೆದಾರರ ಮೇಲೆ ನಿಗಾ ವಹಿಸಲು ನೆರವಾಗುತ್ತದೆ ಮತ್ತು ತೆರೆಗಿ ವಸೂಲಾತಿ ಕಾರ್ಯಕ್ಕೂ ಉತ್ತೇಜನ ಸಿಗುತ್ತದೆ  ಎಂದು ಸಂತೋಷ್ ಗಂಗ್ವಾರ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.