ಹೆಚ್ಚು ಸುರಕ್ಷತೆಯೊಂದಿಗೆ ಶೀಘ್ರ ಬರಲಿದೆ ರೂ. 10 ಮುಖಬೆಲೆಯ ಹೊಸ ನೋಟು
ಶೀಘ್ರದಲ್ಲೇ ಹೆಚ್ಚು ಸುರಕ್ಷತಾ ಲಕ್ಷಣಗಳನ್ನು ಒಳಗೊಂಡ ಹೊಸ 10 ರುಪಾಯಿ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಗುರುವಾರ ಆರ್ಬಿಐ ಹೇಳಿದೆ.

Published On :
ಮುಂಬೈ: ಶೀಘ್ರದಲ್ಲೇ ಹೆಚ್ಚು ಸುರಕ್ಷತಾ ಲಕ್ಷಣಗಳನ್ನು ಒಳಗೊಂಡ ಹೊಸ 10 ರುಪಾಯಿ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಗುರುವಾರ ಆರ್ಬಿಐ ಹೇಳಿದೆ.
ಹೊಸ 10 ರುಪಾಯಿ ನೋಟುಗಳಲ್ಲಿ ಸಂಖ್ಯೆಗಳ ಜತೆ ’L’ ಅಕ್ಷರ ಇರಲಿದೆ. ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರ ಸಹಿ ಹಾಗೂ ಮುದ್ರಣ ವರ್ಷ 2017 ಎಂದಿರಲಿದೆ. ನೋಟಿನ ಎರಡೂ ಬದಿಯಲ್ಲಿರುವ ಸಂಖ್ಯೆಗಳ ಗಾತ್ರ ಬದಲಿಸಲಾಗುವುದು. ಸಂಖ್ಯೆಗಳು ಎಡ ಭಾಗದಲ್ಲಿ ಸಣ್ಣದಿದ್ದರೆ ಬಲಭಾಗಕ್ಕೆ ದೊಡ್ಡದಿರಲಿದೆ. ಎಡಭಾಗದ ಮೊದಲ ಮೂರು ಸಂಖ್ಯೆಗಳು ಮಾತ್ರ ಸಮಾನ ಗಾತ್ರ ಹೊಂದಿರಲಿವೆ ಎಂದು ಆರ್ ಬಿಐ ತಿಳಿಸಿದೆ.
ಈಗ ಚಲಾವಣೆಯಲ್ಲಿರುವ ಹಳೆ 10 ರುಪಾಯಿ ನೋಟುಗಳು ರದ್ದಾಗುವುದಿಲ್ಲ, ಅವುಗಳು ಸಹ ಚಲಾವಣೆಯಲ್ಲಿರಲಿವೆ. ಅವುಗಳ ಜತೆಯಲ್ಲಿ ಹೊಸ ನೋಟುಗಳೂ ಸಹ ಚಲಾವಣೆಗೆ ಬಿಡುಗಡೆ ಮಾಡಲಾಗುವುದು ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


