ಜಿಎಸ್ ಟಿಯ ಆರಂಭಿಕ ಸಮಸ್ಯೆಗಳನ್ನು 2 ತಿಂಗಳಲ್ಲಿ ಬಗೆಹರಿಸಲಾಗುವುದು: ಮುಖ್ಯ ಆರ್ಥಿಕ ಸಲಹೆಗಾರ
ಸರಕು ಮತ್ತು ಸೇವಾ ತೆರಿಗೆ ಜಾರಿಯ ಆರಂಭಿಕ ಸಮಸ್ಯೆಗಳನ್ನು ಇನ್ನೆರಡು ತಿಂಗಳಲ್ಲಿ ಬಗೆಹರಿಸುವ...

Published On :
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಯ ಆರಂಭಿಕ ಸಮಸ್ಯೆಗಳನ್ನು ಇನ್ನೆರಡು ತಿಂಗಳಲ್ಲಿ ಬಗೆಹರಿಸುವ ವಿಶ್ವಾಸವನ್ನು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ವ್ಯಕ್ತಪಡಿಸಿದ್ದಾರೆ.
ಆರಂಭದಲ್ಲಿ ಕೆಲವು ಅಡೆತಡೆಗಳು, ತೊಂದರೆಗಳು ಬರುವುದು ಸಹಜ. ಆದರೆ ಅವುಗಳನ್ನು ಎರಡು ತಿಂಗಳಲ್ಲಿ ಬಗೆಹರಿಸುವ ಸಾಧ್ಯತೆಯಿದೆ ಎಂದು ಸುಬ್ರಹ್ಮಣ್ಯನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಜಿಎಸ್ ಟಿಯನ್ನು ವಿಚ್ಛಿದ್ರಕಾರಕ ಬದಲಾವಣೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಭಾಷಣದಲ್ಲಿ ವ್ಯಾಖ್ಯಾನಿಸಿದ್ದನ್ನು ಪ್ರಸ್ತಾಪಿಸಿದ ಅರವಿಂದ ಸುಬ್ರಹ್ಮಣ್ಯನ್,ಆರ್ಥಿಕತೆಯ ಬೆಳವಣಿಗೆಯ ಕ್ಷಣಗಳಿಗೆ ಯಾವುದೇ ಪರಿಣಾಮ ಬೀರದಂತೆ ಆರಂಭಿಕ ಹಂತದ ಕೆಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ಆರಂಭಿಕ ಹಂತದಲ್ಲಿರುವ ಕೆಲವು ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಬಗೆಹರಿಸಲು ನಿಶ್ಚಯಿಸಿವೆ ಎಂದು ಕೇಂದ್ರ ಜಾಗೃತ ಆಯುಕ್ತ ಕೆ.ವಿ. ಚೌಧರಿ ತಿಳಿಸಿದ್ದಾರೆ.ಜಿಎಸ್ ಟಿ ಒಂದು ಮುಖ್ಯವಾದ ನಡೆಯಾಗಿದ್ದು, ಇದು ಕಪ್ಪು ಮಾರುಕಟ್ಟೆಯನ್ನು ತಡೆಗಟ್ಟಿ ವ್ಯಾಪಾರ ವಹಿವಾಟು ಸುಗಮವಾಗಲು ಸಹಾಯ ಮಾಡುತ್ತದೆ ಎಂದರು.
ಆದಾಯ ತಟಸ್ಥ ಜಿಎಸ್ ಟಿ ಎಂದು ಕೇಂದ್ರ ಸರ್ಕಾರ ಹೇಳಿಕೊಂಡು ಬಂದಿದ್ದು, ಇದರಿಂದ ಸರ್ಕಾರಕ್ಕೆ ಯಾವುದೇ ಹೆಚ್ಚುವರಿ ಆದಾಯವಿಲ್ಲ ಎಂದರು.
ದೇಶದ ಆರ್ಥಿಕ ಬೆಳವಣಿಗೆಗೆ ಜಿಎಸ್ ಟಿ ಸಹಾಯವಾಗುತ್ತದೆಯೇ ಎಂದು ಕೇಳಿದ್ದಕ್ಕೆ ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ, ಕಾದು ನೋಡೋಣ. ಈ ಸಮಯದಲ್ಲಿ ಊಹಿಸುವುದು ಕಷ್ಟ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸರಕು ಮತ್ತು ಸೇವಾ ತೆರಿಗೆGoods and Service taxTeething problemChief Economic Adviserಆರಂಭಿಕ ಸಮಸ್ಯೆಗಳುಮುಖ್ಯ ಆರ್ಥಿಕ ಸಲಹೆಗಾರರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


