2016-17ನೇ ಸಾಲಿನಲ್ಲಿ ಸರ್ಕಾರದಿಂದ 2,35,308 ಕೋಟಿ ರೂ. ಸೆಸ್ ಸಂಗ್ರಹ
ಕಳೆದ ಆರ್ಥಿಕ ವರ್ಷದಲ್ಲಿ ಶಿಕ್ಷಣ, ಸ್ವಚ್ಛ ಭಾರತ್, ಕೃಷಿ ಕಲ್ಯಾಣ ಹಾಗೂ ಇತರೆ ಮೇಲ್ತೆರಿಗೆ(ಸೆಸ್)ಯಿಂದ 2,35,308 ಕೋಟಿ ರುಪಾಯಿ ಸಂಗ್ರಹವಾಗಿದೆ....

Published On :
ನವದೆಹಲಿ: ಕಳೆದ ಆರ್ಥಿಕ ವರ್ಷದಲ್ಲಿ ಶಿಕ್ಷಣ, ಸ್ವಚ್ಛ ಭಾರತ್, ಕೃಷಿ ಕಲ್ಯಾಣ ಹಾಗೂ ಇತರೆ ಮೇಲ್ತೆರಿಗೆ(ಸೆಸ್)ಯಿಂದ 2,35,308 ಕೋಟಿ ರುಪಾಯಿ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ತಿಳಿಸಿದೆ.
ಈ ಕುರಿತು ಇಂದು ಲೋಕಸಭೆಗೆ ಲಿಖಿತ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗಾವರ್ ಅವರು, 2016-17ನೇ ಸಾಲಿನಲ್ಲಿ ಕೇಂದ್ರ ಸರ್ಕಾರ 2,35,308 ಕೋಟಿ ಸೆಸ್ ಸಂಗ್ರಹಿಸಿದ ಮತ್ತು ನೇರ ತೆರಿಗೆಯಿಂದ 46,939.17 ಕೋಟಿ ರುಪಾಯಿ ಆದಾಯ ಹರಿದು ಬಂದಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಮೇಲೆ ತಿಳಿಸಿದ ಸೆಸ್ ಹಾಗೂ ಇನ್ನಿತರ ಮೇಲ್ತೆರಿಗೆಗಳಿಂದ ಪರೋಕ್ಷವಾಗಿ ತೆರಿಗೆ ರೂಪದಲ್ಲಿ 1,88,368.58 ಕೋಟಿ ರುಪಾಯಿ ಸಂಗ್ರಹವಾಗಿದೆ ಎಂದು ಸಂತೋಷ್ ಕುಮಾರ್ ಅವರು ಹೇಳಿದ್ದಾರೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ 2015-16ರ ಬಜೆಟ್ ನಲ್ಲಿ ಎಲ್ಲಾ ಸೇವೆಗಳು ಅಥವಾ ಅಗತ್ಯವಿದ್ದಲ್ಲಿ ಕೆಲವು ಸೇವೆಗಳಿಗೆ ಶೇ.2ರಷ್ಟು ಸ್ವಚ್ಛ ಭಾರತ್ ಸೆಸ್ ಜಾರಿ ಮಾಡಲಾಗಿತ್ತು. ನವೆಂಬರ್ 15, 2015ರಿಂದ ಈ ತೆರಿಗೆ ಸಂಗ್ರಹಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


