ಜಿಎಸ್ ಟಿಯಿಂದ ಕ್ರೆಡಿಟ್ ಕಾರ್ಡಿಗೆ ಎರಡು ಪಟ್ಟು ತೆರಿಗೆ ಕಟ್ಟಬೇಕೆನ್ನುವ ಸಂದೇಶ ಶುದ್ಧ ಸುಳ್ಳು: ಡಾ.ಹಮ್ಸುಕ್ ಆದಿಯಾ
ಕ್ರೆಡಿಟ್ ಕಾರ್ಡುಗಳ ಮೂಲಕ ಹಣ ಪಾವತಿ ಮಾಡಿದರೆ ಎರಡು ಪಟ್ಟು ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ...

Published On :
ನವದೆಹಲಿ: ಕ್ರೆಡಿಟ್ ಕಾರ್ಡುಗಳ ಮೂಲಕ ಹಣ ಪಾವತಿ ಮಾಡಿದರೆ ಎರಡು ಪಟ್ಟು ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸಂದೇಶ ಸತ್ಯಕ್ಕೆ ದೂರವಾದುದು ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಡಾ.ಹಮ್ಸುಕ್ ಆದಿಯಾ ತಿಳಿಸಿದ್ದಾರೆ.
ಜನರು ಈ ರೀತಿಯ ಸಂದೇಶಗಳನ್ನು ಅಥವಾ ಜಿಎಸ್ ಟಿಗೆ ಸಂಬಂಧಪಟ್ಟ ಬೇರೆ ಯಾವುದೇ ಸಂದೇಶಗಳನ್ನು ಖಚಿತಪಡಿಸದೆ ಸಾಮಾಜಿಕ ಮಾಧ್ಯಮದಲ್ಲಿ ಹಬ್ಬಿಸಬಾರದೆಂದು ಅವರು ಒತ್ತಾಯಿಸಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ ಪ್ರಾರಂಭಗೊಂಡ ನಂತರ ಅವರು ಟ್ವಿಟ್ಟರ್ ನಲ್ಲಿ ಈ ಹೇಳಿಕೆ ನೀಡಿದ್ದಾರೆ.
ಕ್ರೆಡಿಟ್ ಕಾರ್ಡು ಬಳಸಿದರೆ ಶೇಕಡಾ 18ರಷ್ಟು ತೆರಿಗೆ ವಿಧಿಸಲು ಸರಕು ಮತ್ತು ಸೇವಾ ತೆರಿಗೆ ಮಂಡಳಿ ನಿರ್ಧರಿಸಿದೆ. ಮುಂಚೆ ಶೇಕಡಾ 15ರಷ್ಟು ತೆರಿಗೆ ಪಾವತಿಸಬೇಕಾಗುತ್ತಿತ್ತು. ಜಿಎಸ್ ಟಿ ಬಂದ ನಂತರ ಶೇಕಡಾ 3ರಷ್ಟು ಹೆಚ್ಚಾಗಿದೆ.
ಸರಕು ಮತ್ತು ಸೇವಾ ತೆರಿಗೆ ಸಾಧ್ಯತೆ ಪ್ರಕಾರ, ಕ್ರೆಡಿಟ್ ಕಾರ್ಡುಗಳಲ್ಲದೆ ಇತರ ಹಣಕಾಸು ಸೇವೆಗಳಿಗೆ ಕೂಡ ಗ್ರಾಹಕರು ಹೆಚ್ಚು ತೆರಿಗೆ ಕಟ್ಟಬೇಕು. ಬ್ಯಾಂಕಿಂಗ್ ಸೇವೆಗಳು, ವಿಮಾ ಪ್ರೀಮಿಯಂ ಪಾವತಿ ಇತ್ಯಾದಿಗಳಿಗೆ ಕೂಡ ಶೇಕಡಾ 18ರಷ್ಟು ತೆರಿಗೆ ಪಾವತಿಸಬೇಕು.
ಬ್ಯಾಂಕಿಂಗ್ ಸೇವೆಗಳಲ್ಲಿ, ಗೃಹ ಸಾಲ ಪ್ರಕ್ರಿಯೆ ಶುಲ್ಕ, ಹಣ ವರ್ಗಾವಣೆ, ಡೆಬಿಟ್ ಕಾರ್ಡು, ಉಚಿತ ಸೇವೆಗಳಿಗಿಂತ ಜಾಸ್ತಿ ಬಾರಿ ಎಟಿಎಂಗಳನ್ನು ಹಣ ಪಡೆಯಲು ಬಳಸಿದರೆ, ಚೆಕ್ ವಿತರಣೆ, ಡ್ರಾಫ್ಟ್, ನಕಲಿ ಪಾಸ್ ಬುಕ್, ನಗದು ನಿರ್ವಹಣೆ ಶುಲ್ಕ ಮತ್ತು ಎಸ್ಎಂಎಸ್ ಗಳಿಗೆ ಜಿಎಸ್ ಟಿ ಬಂದ ಮೇಲೆ ತೆರಿಗೆ ಹೆಚ್ಚಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


