ಚೀನಾ ಜಿಡಿಪಿ 26 ವರ್ಷಗಳಲ್ಲೇ ದಾಖಲೆಯ ಕುಸಿತ
ಚೀನಾ ಜಿಡಿಪಿ ಕಳೆದ 26 ವರ್ಷಗಳಲ್ಲೇ ದಾಖಲೆಯ ಪ್ರಮಾಣದಲ್ಲಿ ಕುಸಿದಿದ್ದು, 2016 ನೇ ಸಾಲಿನಲ್ಲಿ 6.7 ರಷ್ಟಾಗಿದೆ.

Published On :
ಬೀಜಿಂಗ್: ಚೀನಾ ಜಿಡಿಪಿ ಕಳೆದ 26 ವರ್ಷಗಳಲ್ಲೇ ದಾಖಲೆಯ ಪ್ರಮಾಣದಲ್ಲಿ ಕುಸಿದಿದ್ದು, 2016 ನೇ ಸಾಲಿನಲ್ಲಿ 6.7 ರಷ್ಟಾಗಿದೆ.
ಜಿಡಿಪಿ ದಾಖಲೆಯ ಪ್ರಮಾಣದಲ್ಲಿ ಕುಸಿದಿದ್ದರೂ ಸಹ ಸರ್ಕಾರದ ನಿರೀಕ್ಷಿತ ಗುರಿ ತಲುಪಿದೆ ಎಂದು ಅಲ್ಲಿನ ಅಧಿಕೃತ ಅಂಕಿ-ಅಂಶಗಳು ಹೇಳಿವೆ. ನಾಲ್ಕನೇ ತ್ರೈಮಾಸಿಕದಲ್ಲಿ ಕಳೆದ ತ್ರೈಮಾಸಿಕಕ್ಕಿಂತಲೂ ಹೆಚ್ಚಿನ ಬೆಳವಣಿಗೆಯಾಗಿದೆ ಎಂದು ರಾಷ್ಟ್ರೀಯ ಅಂಕಿ-ಅಂಶ ದಳ(ಎನ್ ಬಿಎಸ್) ಹೇಳಿದೆ.
2016 ನೇ ಆರ್ಥಿಕ ವರ್ಷಕ್ಕೆ ಚೀನಾ ಶೇ.6.7 ರಿಂದ ಶೇ.7 ರಷ್ಟು ಜಿಡಿಪಿ ಗುರಿ ಹೊಂದಿತ್ತು. 2016 ರಲ್ಲಿ ಜಿಡಿಪಿ 10 ಟ್ರಿಲಿಯನ್ ಡಾಲರ್ ಗಳಷ್ಟಾಗಿದ್ದು, ಸೇವಾ ಕ್ಷೇತ್ರದಿಂದ ಶೇ.51.6 ರಷ್ಟು ಕೊಡುಗೆ ನೀಡಿದ್ದರೆ 2015 ರಲ್ಲಿ ಶೇ.6.1 ರಷ್ಟಿದ್ದ ಕೈಗಾರಿಕಾ ಉತ್ಪಾದನೆ ಶೇ.6 ಕ್ಕೆ ಕುಸಿದಿದೆ. ಇನ್ನು ಚಿಲ್ಲರೆ ಮಾರಾಟ ಶೇ.10.4 ರಷ್ಟಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


