ವಾಣಿಜ್ಯ

ಎರಡು ತಿಂಗಳಲ್ಲಿ 4,807 ಕೋಟಿ ರೂ.ಕಪ್ಪು ಹಣ ಪತ್ತೆ: ಐಟಿ ಇಲಾಖೆ

ಅಧಿಕ ಮೌಲ್ಯದ ನೋಟುಗಳ ಚಲಾವಣೆ ಹಿಂತೆಗೆತದ ನಂತರ ಸುಮಾರು 4,807 ಕೋಟಿ ರೂಪಾಯಿ...

ಎರಡು ತಿಂಗಳಲ್ಲಿ 4,807 ಕೋಟಿ ರೂ.ಕಪ್ಪು ಹಣ ಪತ್ತೆ: ಐಟಿ ಇಲಾಖೆ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಅಧಿಕ ಮೌಲ್ಯದ ನೋಟುಗಳ ಚಲಾವಣೆ ಹಿಂತೆಗೆತದ ನಂತರ ಸುಮಾರು 4,807 ಕೋಟಿ ರೂಪಾಯಿ ಅಘೋಷಿತ ಆದಾಯವನ್ನು ಪತ್ತೆ ಹಚ್ಚಿರುವ ಆದಾಯ ತೆರಿಗೆ ಇಲಾಖೆ 112 ಕೋಟಿ ರೂಪಾಯಿಗಳಷ್ಟು ಹೊಸ ಕರೆನ್ಸಿಗಳನ್ನು ಇದುವರೆಗೆ ದೇಶಾದ್ಯಂತ ನಡೆಸಿದ ಕಪ್ಪು ಹಣದ ವಿರುದ್ಧದ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದೆ.
ನವೆಂಬರ್ 8ರಿಂದ ಇಲ್ಲಿಯವರೆಗೆ ತೆರಿಗೆ ಇಲಾಖೆ ಅಧಿಕಾರಿಗಳು ದೇಶಾದ್ಯಂತ 1,138 ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದೆ, ತೆರಿಗೆ ವಂಚನೆ ಮತ್ತು ಹವಾಲಾದಂತಹ ಹಣ ಕಳ್ಳಸಾಗಣೆ ಆರೋಪದಡಿ ಆದಾಯ ತೆರಿಗೆ ಇಲಾಖೆ 5,184 ನೊಟೀಸ್ ಜಾರಿ ಮಾಡಿದೆ.
ಈ ಸಮಯದಲ್ಲಿ ಇಲಾಖೆ 609.39 ಕೋಟಿ ರೂಪಾಯಿ ಬೆಲೆ ಬಾಳುವ ನಗದು ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದ್ದು ಹೊಸ ಕರೆನ್ಸಿಗಳನ್ನು ವಶಪಡಿಸಿಕೊಂಡಿರುವ ಮೊತ್ತ 112.8 ಕೋಟಿ ರೂಪಾಯಿಗಳಷ್ಟಾಗಿದೆ.
ವಶಪಡಿಸಿಕೊಳ್ಳಲಾದ ಆಭರಣ ಮೊತ್ತ 97.8 ಕೋಟಿಯಾಗಿದೆ. ಒಟ್ಟು ಅಘೋಷಿತ ಆದಾಯ ಜನವರಿ 5ರವರೆಗೆ 4,807.45 ಕೋಟಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.