ಗ್ರಾಮೀಣ ಭಾಗಕ್ಕೆ ಶೇ.40ರಷ್ಟು ನೋಟು ಪೂರೈಕೆ ಮಾಡಿ: ಬ್ಯಾಂಕ್ ಗಳಿಗೆ ಆರ್‌ಬಿಐ ಸೂಚನೆ
500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿ 50 ದಿನ ಕಳೆದರೂ ಜನ ಇನ್ನೂ ನಗದು ಬಿಕ್ಕಟ್ಟು ಎದುರಿಸುತ್ತಿದ್ದು, ...

Published On :
ಮುಂಬೈ: 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿ 50 ದಿನ ಕಳೆದರೂ ಜನ ಇನ್ನೂ ನಗದು ಬಿಕ್ಕಟ್ಟು ಎದುರಿಸುತ್ತಿದ್ದು, ಗ್ರಾಮೀಣ ಭಾಗದ ರೈತರು ಮತ್ತು ಬಡವರ ಸಂಕಷ್ಟಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆರ್ ಬಿಐ ಗ್ರಾಮೀಣ ಭಾಗಗಳಿಗೆ ಶೇ.40ರಷ್ಟು ಕರೆನ್ಸಿ ನೋಟುಗಳನ್ನು ಪೂರೈಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದೆ.
ನೋಟು ವಿನಿಮಯದ 50 ದಿನಗಳ ಗಡುವು ಮುಗಿದಿರುವ ಹೊರತಾಗಿಯೂ ದೇಶದ ವಿವಿಧೆಡೆಗಳಲ್ಲಿ, ವಿಶೇಷವಾಗಿ ರೈತರು ಮತ್ತು ಬಡವರಿಗೆ, ನಗದು ಕೊರತೆಯು ತೀವ್ರವಾಗಿ ಬಾಧಿಸುತ್ತಿದೆ. ಇದರ ಪರಿಣಾಮವಾಗಿ ಸರಕಾರ, ಜನರು ಬ್ಯಾಂಕುಗಳಿಂದ ವಾರಕ್ಕೆ 24,000 ರು.ಗಳ ಹಿಂಪಡೆಯುವ ಮಿತಿಯನ್ನು ತೆರವು ಗೊಳಿಸಿಲ್ಲ.
ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ನೋಟುಗಳನ್ನು ಗ್ರಾಮೀಣ ಭಾಗಗಳಿಗೆ ಪೂರೈಸದಿರುವುದನ್ನು ಗಮನಿಸಿ ಆರ್ ಬಿ ಐ, ಬ್ಯಾಂಕುಗಳಿಗೆ ಶೇ.40ರಷ್ಟು ಪ್ರಮಾಣದಲ್ಲಿ ನೋಟುಗಳನ್ನು ಗ್ರಾಮೀಣ ಭಾಗಗಳಿಗೆ ಪೂರೈಸುವಂತೆ ಆದೇಶ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


