ವಾಣಿಜ್ಯ

ಆಕರ್ಷಕ ತಾಣಗಳಿಗೆ ಕಡಿಮೆ ದರದಲ್ಲಿ ವಿಮಾನ ಯಾನ; ಏರ್ ಏಷ್ಯಾ ಆಫರ್!

ವಿಮಾನ ಪ್ರಯಾಣ ಎಂದರೆ ದುಬಾರಿ ಎನ್ನುವಂತಹ ಚಿತ್ರಣವನ್ನು ಹೋಗಲಾಡಿಸಲು ಏರ್ ಏಷ್ಯಾ ಮುಂದಾಗಿದೆ. ಕಡಿಮೆ ದರದಲ್ಲಿ ಆಕರ್ಷಕ ತಾಣಗಳಿಗೆ ವಿಮಾನ ಯಾನ ಮಾಡಬಹುದು...

ಆಕರ್ಷಕ ತಾಣಗಳಿಗೆ ಕಡಿಮೆ ದರದಲ್ಲಿ ವಿಮಾನ ಯಾನ; ಏರ್ ಏಷ್ಯಾ ಆಫರ್!
ಏರ್ ಏಷ್ಯಾ ವಿಮಾನ
Published On :

ಕುಟುಂಬದ ರಜಾ ಪ್ರವಾಸ ಏರ್ಪಡಿಸುವುದು ತ್ರಾಸದ ಕೆಲಸವೇ ಸರಿ. ಪ್ರಯಾಣದ ಸಮಯ, ಟಿಕೆಟ್, ಹೋಟೆಲ್ ಬುಕಿಂಗ್ ಇತ್ಯಾದಿಗಳನ್ನು ಸರಿಯಾಗಿ ಹೊಂದಿಸುವಷ್ಟರಲ್ಲಿ ಸಾಕಾಗಿ, ಸಣ್ಣ ಬ್ರೇಕ್ ಸಿಕ್ಕಿದರೆ ಸಾಕಪ್ಪ ಎನ್ನುವಂತಾಗುತ್ತದೆ! ಒಳ್ಳೆಯ ರಜಾ ಪ್ರವಾಸ ಮಾಡುಬೇಕು ಜೊತೆಗೆ ಖರ್ಚೂ ಕಡಿಮೆಯಾಗಬೇಕು ಎಂಬಂತೆ ವಿಶ್ವದಾದ್ಯಂತ ಎಲ್ಲರೂ ಯೋಚಿಸುತ್ತಾರೆ. ಇದು ಕೆಲವೊಮ್ಮೆ ದೊಡ್ಡ ತೊಡಕಾಗಿ ಅಲಲ್ಲಿ ನಾವು ರಾಜಿ ಮಾಡಿಕೊಳ್ಳುವಂತೆ ಮಾಡುತ್ತದೆ. ವಿಮಾನ ಪ್ರಯಾಣ ಎಂದರೆ ದುಬಾರಿ ಎನ್ನುವಂತಹ ಚಿತ್ರಣವನ್ನು ಹೋಗಲಾಡಿಸಲು ಏರ್ ಏಷ್ಯಾ ಮುಂದಾಗಿದೆ. ಕಡಿಮೆ ದರದಲ್ಲಿ ಆಕರ್ಷಕ ತಾಣಗಳಿಗೆ ವಿಮಾನ ಯಾನ ಮಾಡಬಹುದು ಎಂಬುದನ್ನು ನಾವು ತೋರಿಸುತ್ತೇವೆ!

ಕೌಲಾಲಂಪುರ ವಿಶ್ವದ ಒಂದು ಅತ್ಯಂತ ಜನಪ್ರಿಯ ರಜಾ ಪ್ರವಾಸಿ ತಾಣ, ಮತ್ತು ನೀವು ಅಲ್ಲಿಗೆ ಸುಲಭವಾಗಿ ತಲುಪಲು ಏರ್ ಏಷ್ಯಾ ಸಹಾಯ ಮಾಡುತ್ತದೆ. ಒಂದು ಪ್ರವಾಸವನ್ನು ಏರ್ಪಡಿಸುವುದು ಎಷ್ಟು ಕಷ್ಟದ ಕೆಲಸ ಎಂಬುದು ಅವರಿಗೆ ತಿಳಿದಿದೆ, ಆದರೆ ನಿಮ್ಮ ನೆಚ್ಚಿನ ತಾಣಕ್ಕೆ ತಲುಪುವುದರಿಂದ ಒಂದು ಸಂತೃಪ್ತ ಭಾವನೆ ನಿಮಗಾಗುತ್ತದೆ ಮತ್ತು ಖಂಡಿತವಾಗಿ ಕೌಲಾಲಂಪುರದಲ್ಲಿ ನೀವು ಈ ಅನುಭವವನ್ನು ಪಡೆಯಲಿದ್ದೀರಿ.

Story image



ಆರಾಮದಾಯಕ ವಿಮಾನಯಾನ ಮತ್ತು ಆಕರ್ಷಕ ಪ್ರವಾಸಿ ತಾಣಗಳೆರಡನ್ನು ಸರಿದೂಗಿಸುವುದು ಸ್ವಲ್ಪ ಕಷ್ಟವೇ ಸರಿ. ಆದರೆ ನಿಮಗೆ ಇವೆರಡೂ ಸೇವೆ ಉತ್ತಮವಾಗಿ ಸಿಗುತ್ತದೆ ಎಂಬುದನ್ನು ಏರ್ ಏಷ್ಯಾ ಖಚಿತಪಡಿಸುತ್ತದೆ. ಹೌದು, ಒಂದು ಒಳ್ಳೆಯ ಪ್ರವಾಸಕ್ಕೆ ತುಂಬಾ ದುಡ್ಡು ಖರ್ಚು ಮಾಡಬೇಕು, ಆದರೆ ನಿಮ್ಮ ಜೇಬಿಗೆ ಕತ್ತರಿ ಹಾಕಬೇಕು ಎಂಬ ಅರ್ಥವಲ್ಲ. ಏರ್ ಏಷ್ಯಾ ಕಡಿಮೆ ದರದಲ್ಲಿ ವಿಮಾನ ಸೀಟುಗಳನ್ನು ಪಡೆಯಲು ಮತ್ತು ಉಳಿದುಕೊಳ್ಳಲು ಕೈಗೆಟುಕುವ ಬೆಲೆಯ ಹಲವಾರು ಹೋಟೆಲ್ ಗಳನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ.

ಮಲೇಷಿಯಾ ದೇಶವು ತನ್ನ ಆಹಾರ ವೈವಿಧ್ಯತೆ, ಶಾಪಿಂಗ್, ಆಕರ್ಷಣೀಯ ಪ್ರಕೃತಿ ತಾಣಗಳಿಗೆ ಹೆಸರುವಾಸಿಯಾಗಿದ್ದು, ಇವೆಲ್ಲಾ ನೀವು ಇಂದೇ ಸೀಟುಗಳನ್ನು ಬುಕ್ ಮಾಡುವಂತೆ ಮಾಡುತ್ತದೆ. ಮಲೇಷಿಯಾದ ಆಕರ್ಷಕ ರಾಜಧಾನಿ ನಗರದಲ್ಲಿನ ಸುಮಾರು 900 ಹೋಟೆಲ್ ಗಳಲ್ಲಿ ನಿಮಗೆ ನಿಮ್ಮ ಕೈಗೆಟುಕುವ ದರದಲ್ಲಿ ರೂಮುಗಳು ಸಿಗುವಂತೆ ಏರ್ ಏಷ್ಯಾ ಅವಕಾಶ ಕಲ್ಪಿಸುತ್ತದೆ.

ದೀಪಾಲಂಕಾರದಿಂದ ಕಂಗೊಳಿಸುವ ಮಹಾನ್ ನಗರವನ್ನು ಹೊರತುಪಡಿಸಿ, ನೀವು ಆಕರ್ಷಕ ಆಹಾರ ಮತ್ತು ಪ್ರಕೃತಿಗೆ ಹೆಸರುವಾಸಿಯಾದ ಪೆನಾಂಗ್ ದ್ವೀಪಕ್ಕೆ ವಿಮಾನಯಾನ ಮಾಡಬಹುದು. ಈ ದ್ವೀಪದಲ್ಲಿ ನೀವು ನೋಡಲೇಬೇಕಾದಂತಹ ಕೆಲವು ದೇವಸ್ಥಾನಗಳು ಮತ್ತು ಮ್ಯೂಸಿಯಮ್ ಗಳು, ಬೀಚ್ ಗಳು, ಮೀನುಗಾರಿಕೆ ಗ್ರಾಮಗಳು ಮತ್ತು ಪರ್ವತ ಶ್ರೇಣಿಯ ಅರಣ್ಯಗಳು ಹಾಗು ತೋಟಗಳೂ ಇವೆ.

ಅದು ಕುಟುಂಬದ ರಜಾ ಪ್ರವಾಸವೇ ಆಗಿರಲಿ ಅಥವಾ ಗೆಳೆಯರೊಂದಿಗಿನ ಪ್ರವಾಸವೇ ಆಗಿರಲಿ, ಮಲೇಷಿಯಾ ನೀವು ನೋಡಲೇಬೇಕಾದ ಪ್ರವಾಸಿ ತಾಣ ಎಂಬುದು ಮಾತ್ರ ಖಚಿತ. ನೀವು ಬೀಚುಗಳನ್ನೇ ಇಷ್ಟ ಪಡಿ ಅಥವಾ ದಿನವಿಡೀ ಪಾರ್ಟಿ ಮಾಡಿ, ಅದು ಜಾರ್ಜ್ ಟೌನ್ ಆಗಿರಲಿ ಅಥವಾ ಮಿರಿ ಆಗಿರಲಿ, ಮಲೇಷಿಯಾ ಪ್ರತಿಯೋಬ್ಬ ಪ್ರವಾಸಿಗನನ್ನೂ ಸಂತೃಪ್ತಗೊಳಿಸುತ್ತದೆ.

Story image



ಮಲೇಷ್ಯಾದ ಈ ಕಡಿಮೆ ದರದ ಏರ್ ಲೈನ್ಸ್ ಏರ್ ಏಷ್ಯಾ, ಸಾಮಾನ್ಯ ಜನರು ಕೈಗುಟುಕುವ ದರದಲ್ಲಿ ಟಿಕೆಟ್ ಪಡೆಯಲು ಮತ್ತು ಒಂದು ಉತ್ತಮ ಪ್ರಯಾಣದ ಅನುಭವನ್ನು ನಿಮಗೆ ನೀಡಲು ಬಯಸುತ್ತದೆ.

ಏರ್ ಏಷ್ಯಾ ದಲ್ಲಿನ ನ್ಯಾಯಸಮ್ಮತ ಬೆಲೆಯ ವಿಮಾನ ಪ್ರಯಾಣ ದರಗಳಿಂದಾಗಿ, ಕುಟುಂಬಗಳು ಈಗ ಹೋಟೆಲ್ ಮತ್ತು ಇತರ ಖರ್ಚುಗಳ ಮೇಲೆ ಹಣವನ್ನು ವೆಚ್ಚ ಮಾಡಬಹುದು ಮತ್ತು ತಮ್ಮ ಜೇಬಿಗೂ ಭಾರವಾಗದಂತೆ ಕೌಲಾಲಂಪುರದ ಸೌಂದರ್ಯವನ್ನು ಸವಿಯಬಹುದು. ಏಷ್ಯಾದಾದ್ಯಾಂತದ ಸುಮಾರು 100 ಪ್ರವಾಸಿ ತಾಣಗಳಿಗೆ ಏರ್ ಏಷ್ಯಾ ಆನ್ ಲೈನ್ ನಲ್ಲಿ ಕಡಿಮೆ ದರಗಳೊಂದಿಗೆ ಪ್ರತಿದಿನ ಹಲವಾರು ವಿಮಾನಗಳ ಹಾರಾಟ ನಡೆಸುತ್ತದೆ.

ಏರ್ ಏಷ್ಯಾ ದಲ್ಲಿ ಪ್ರಯಾಣಿಸಿ, ವಿಶ್ವದ ಅತಿ ಕಡಿಮೆ ಬೆಲೆಯ ಅತ್ಯುತ್ತಮ ವಿಮಾನಯಾನದ ಅನುಭವ ಪಡೆಯಿರಿ!

ಈಗಲೇ ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.