ಷೇರುಪೇಟೆಯಲ್ಲಿ ದಾಖಲೆ: 34 ಸಾವಿರ ಗಡಿ ದಾಟಿದ ಸೆನ್ಸೆಕ್ಸ್
ಸತತ ಎರಡನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಏರುಗತಿಯಲ್ಲಿ ಸಾಗಿದ್ದು, ಬುಧವಾರ ಸೆನ್ಸೆಕ್ಸ್ ದಾಖಲೆ ಪ್ರಮಾಣದ 34 ಸಾವಿರ ಅಂಕಗಳ ಗಡಿ ದಾಟಿದೆ.

Published On :
ಮುಂಬೈ: ಸತತ ಎರಡನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಏರುಗತಿಯಲ್ಲಿ ಸಾಗಿದ್ದು, ಬುಧವಾರ ಸೆನ್ಸೆಕ್ಸ್ ದಾಖಲೆ ಪ್ರಮಾಣದ 34 ಸಾವಿರ ಅಂಕಗಳ ಗಡಿ ದಾಟಿದೆ.
ಇಂದಿನ ವಹಿವಾಟು ಆರಂಭವಾಗುತ್ತಿದ್ದಂತೆಯೇ ಇಂಧನ ವಿಭಾಗದ ಷೇರುಗಳ ಮೌಲ್ಯ ಭಾರಿ ಪ್ರಮಾಣದ ಏರಿಕೆ ಕಂಡಿದ್ದು, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯೇ ಸೆನ್ಸೆಕ್ಸ್ ಏರಿಕೆಗೆ ಕಾರಣ ಎನ್ನಲಾಗಿದೆ. ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಇಂದು 76.71 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 34,087 ಅಂಕಗಳಿಗೆ ಏರಿಕೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆ ಎಂದು ಹೇಳಲಾಗುತ್ತಿದೆ. ಇಂದಿನ ವಹಿವಾಟಿನಲ್ಲಿ ಪ್ರಮುಖವಾಗಿ ವೈದ್ಯಕೀಯ ಮತ್ತು ಇಂಧನ ವಿಭಾಗದ ಷೇರುಗಳ ಮೌಲ್ಯ ಏರಿಕೆ ಕಂಡಿವೆ. ಕಳೆದೆರಡು ವಹಿವಾಟಿನ ಅವಧಿಯಲ್ಲಿ ಸೆನ್ಸೆಕ್ಸ್ ಒಟ್ಟು 254.33 ಅಂಕಗಳನ್ನು ಏರಿಕೆ ಮಾಡಿಕೊಂಡಿದೆ.
ಇನ್ನು ಲಿಬಿಯಾದಲ್ಲಿ ಮಂಗಳವಾರ ಸಂಭವಿಸಿದ ಆಯಿಲ್ ಪೈಪ್ ಸ್ಫೋಟದಿಂದಾಗಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಗೆ ರಫ್ತಾಗುತ್ತಿದ್ದ ತೈಲ ಪ್ರಮಾಣದಲ್ಲಿ ಭಾರಿ ವ್ಯತ್ಯಯ ಕಂಡುಬಂದಿದ್ದು, ಇದರಿಂದ ತೈಲ ರಫ್ತು ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಅಂತೆಯೇ ಕಚ್ಚಾತೈಲ ಬೇಡಿಕೆ ಹೆಚ್ಚಳವಾದ ಪರಿಣಾಮ ಕಚ್ಛಾತೈಲ ದರ ಕೂಡ ಏರಿಕೆಯಾಗಿದೆ. 205ರಿಂದೀಚೆಗೆ ಇದೇ ಮೊದಲ ಬಾರಿಗೆ ಕಚ್ಛಾ ತೈಲದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಹೇಳಲಾಗಿದೆ.
ಈ ಹಿಂದೆ 50 ಡಾಲರ್ ಗಳ ಆಸುಪಾಸಿನಲ್ಲಿದ್ದ ಪ್ರತೀ ಬ್ಯಾರೆಲ್ ಕಚ್ಛಾ ತೈಲ ಇದೀಗ ಏಕಾಏಕಿ 60 ಡಾಲರ್ ಗಳಿಗೆ ಏರಿಕೆಯಾಗಿದೆ.
ಇನ್ನು ನಿಫ್ಟಿಯಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಇಂದಿನ ವಹಿವಾಟಿನಲ್ಲಿ ನಿಫ್ಟಿ 1.75 ಅಂಕ ಕುಸಿತ ಕಾಣುವ ಮೂಲಕ 10,533.25 ಅಂಕಗಳಿಗೆ ಇಳಿಕೆಯಾಗಿದೆ. ಪ್ರಮುಖವಾಗಿ ಇಂದಿನ ವಹಿವಾಟಿನಲ್ಲಿ ಸನ್ ಫಾರ್ಮಾ, ಎನ್ ಟಿಪಿಸಿ, ಒಎನ್ ಜಿಸಿ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಶೇ.2.88 ರಷ್ಟು ಏರಿಕೆಯಾಗಿದೆ. ವರ್ಷಾಂತ್ಯದ ಸಂದರ್ಭದಲ್ಲಿ ಸ್ಟಾಕ್ ಕ್ಲಿಯರೆನ್ಸ್ ಗಾಗಿ ಸಂಸ್ಥೆಗಳು ನೀಡುತ್ತಿರುವ ರಿಯಾಯಿತಿಗಳು ಹೂಡಿಕೆದಾರರಿಗೆ ಮತ್ತು ಗ್ರಾಹಕರಿಗೆ ವರವಾಗಿ ಪರಿಣಮಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶೀಯ ಸಾಂಸ್ಥಿಕ ಹೂಡಿಕೆದಾರರು ಸುಮಾರು 544.50 ಕೋಟಿ ಮೌಲ್ಯದ ಷೇರುಗಳ ಖರೀದಿ ಮಾಡಿದ್ದು, ನಿನ್ನೆ ಒಂದೇ ದಿನದಲ್ಲಿ ವಿದೇಶಿ ಹೂಡಿಕೆದಾರರು 44.07 ಕೋಟಿ ಮೌಲ್ಯದ ದೇಶೀಯ ಷೇರುಗಳನ್ನು ಖರೀದಿ ಮಾಡಿದ್ದಾರೆ ಎಂದು ಪ್ರಸ್ತುತ ಲಭ್ಯವಾಗಿರುವ ದತ್ತಾಂಶಗಳಿಂದ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiಮುಂಬೈSensexಸೆನ್ಸೆಕ್ಸ್Indian stock marketಭಾರತೀಯ ಷೇರು ಮಾರುಕಟ್ಟೆLibya oil Pipeline Blastಲಿಬಿಯಾ ಆಯಿಲ್ ಪೈಪ್ ಲೈನ್ ಸ್ಫೋಟ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


