ಟಿಸಿಎಸ್-ನೀಲ್ಸನ್ ನಡುವೆ ದಾಖಲೆಯ 2.25 ಬಿಲಿಯನ್ ಡಾಲರ್ ಹೊರಗುತ್ತಿಗೆ ಒಪ್ಪಂದ
ಭಾರತದ ಪ್ರಖ್ಯಾತ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ದಾಖಲೆಯ ಬಹುಕೋಟಿ ಮೌಲ್ಯದ ಹೊರಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

Published On :
ನವದೆಹಲಿ: ಭಾರತದ ಪ್ರಖ್ಯಾತ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ದಾಖಲೆಯ ಬಹುಕೋಟಿ ಮೌಲ್ಯದ ಹೊರಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. 2.25 ಬಿಲಯನ್ ಅಮೆರಿಕನ್ ಡಾಲರ್ ಮೌಲ್ಯದ ಹೊರಗುತ್ತಿಗೆ ಒಪ್ಪಂದ ಟಿಸಿಎಸ್ ಮತ್ತು ನೀಲ್ಸನ್ ನಡುವೆ ನಡೆದಿದೆ.
ನೂತನ ಒಪ್ಪಂದಕ್ಕೆ ಮುನ್ನ ಟಿಸಿಎಸ್, ಇನ್ನೂ ಎರಡು ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿತ್ತು. ಅವು ಕ್ರಮವಾಗಿ 2008 ಹಾಗು 2013 ರಲ್ಲಿ ನದೆದಿತ್ತು. ಆ ಒಪ್ಪಂದಗಳ ಮೌಲ್ಯ ಸಹ ಬೃಹತ್ ಪ್ರಮಾಣದ್ದಾಗಿದ್ದು ಈ ಒಪ್ಪಂದ ಡಿ.31, 2025ರ ತನಕ ಚಾಲ್ತಿಯಲ್ಲಿರಲಿದೆ.
ಯುಕೆ ಮೂಲದ ಟಿವಿ ರೇಟಿಂಗ್ ಅಳತೆ ಮಾಡುವ ಸಂಸ್ಥೆ ನೀಲ್ಸನ್ ಜತೆಗಿನ ಒಪ್ಪಂದದ ಪರಿಣಾಮ ಮುಂಬರುವ ವರ್ಷದಲ್ಲಿ ಟಿಸಿಎಸ್ ವಹಿವಾಟು 320 ಮಿಲಿಯನ್ ಡಾಲರ್ ಗೆ ತಲುಪುವ ನಿರೀಕ್ಷೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Tata Consultancy Services (TCS)ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)Nielsenoutsourcing contractIT exporter companyನೀಲ್ಸನ್ಹೊರಗುತ್ತಿಗೆ ಒಪ್ಪಂದಐಟಿ ರಫ್ತು ಸಂಸ್ಥೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


