ವಾಣಿಜ್ಯ

ನೋಟು ನಿಷೇಧದಿಂದ ಭಾರತಕ್ಕೆ ಭವಿಷ್ಯದಲ್ಲಿ ಆರೋಗ್ಯಕರ ಲಾಭಗಳು: ಐಎಂಎಫ್

ಭಾರತ ಸರ್ಕಾರದ ಉದ್ದೇಶಿತ ನೋಟು ನಿಷೇಧ ಕ್ರಮಗಳಿಂದಾಗಿ ಆ ದೇಶಕ್ಕೆ ಭವಿಷ್ಯದಲ್ಲಿ ಆರೋಗ್ಯಕರ ಆರ್ಥಿಕ ಲಾಭಗಳಾಗಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಆರ್ಥಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ನೋಟು ನಿಷೇಧದಿಂದ ಭಾರತಕ್ಕೆ ಭವಿಷ್ಯದಲ್ಲಿ ಆರೋಗ್ಯಕರ ಲಾಭಗಳು: ಐಎಂಎಫ್
ಸಂಗ್ರಹ ಚಿತ್ರ
Published On :
ವಾಷಿಂಗ್ಟನ್: ಭಾರತ ಸರ್ಕಾರದ ಉದ್ದೇಶಿತ ನೋಟು ನಿಷೇಧ ಕ್ರಮಗಳಿಂದಾಗಿ ಆ ದೇಶಕ್ಕೆ ಭವಿಷ್ಯದಲ್ಲಿ ಆರೋಗ್ಯಕರ ಆರ್ಥಿಕ ಲಾಭಗಳಾಗಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಆರ್ಥಿಕ ತಜ್ಞರೊಬ್ಬರು  ಅಭಿಪ್ರಾಯಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸುದ್ದಿ ಸಮಾವೇಶದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಖ್ಯಾತ ಹಣಕಾಸು ತಜ್ಞ ವಿಲಿಯಂ ಮುರ್ರೆ  ಅವರು, ವರ್ಷಗಳ ಹಿಂದೆ ಭಾರತ ಸರ್ಕಾರ ಕೈಗೊಂಡ ನೋಟು  ನಿಷೇಧದಂತಹ ಕ್ರಮಗಳ ಪರಿಣಾಮ ಭಾರತಕ್ಕೆ ಭವಿಷ್ಯದಲ್ಲಿ ಆರೋಗ್ಯಕರ ಆರ್ಥಿಕ ಲಾಭಗಳಾಗಲಿವೆ. ಈಗಾಗಲೇ ಇದರ ಪರಿಣಾಮ ಆರಂಭವಾಗಿದ್ದು, ಭವಿಷ್ಯದಲ್ಲಿ ಇನ್ನೂ ಉತ್ತಮ ಸಂಭಾವ್ಯ ಅವಕಾಶಗಳು ಭಾರತದ  ಪಾಲಾಗಲಿವೆ ಎಂದು ಹೇಳಿದ್ದಾರೆ. 
ಭಾರತ ಸರ್ಕಾರ ತನಗಿದ್ದ ಆರ್ಥಿಕ ಅಡೆತಡೆಗಳನ್ನು ನೋಟು ನಿಷೇಧದ ಮೂಲಕ ಪರಿಹರಿಸಿಕೊಂಡಿದ್ದು, ಪ್ರಸ್ತುತ ವಿತ್ತೀಯ ಕೊರತೆಯಿಂದಾಗಿ ಪ್ರಾಥಮಿಕ ಮತ್ತು ಮಧ್ಯಮ ಗಾತ್ರದ ವಾಣಿಜ್ಯ ಉಧ್ಯಮಗಳಿಗೆ  ತೊಂದರೆಯಾಗುತ್ತಿರಬಹುದು. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಂಡರೆ ಖಂಡಿತ ಭವಿಷ್ಯದಲ್ಲಿ ಭಾರತಕ್ಕೆ ಲಾಭವಾಗಲಿದೆ. ಅಂತಹ ಲಕ್ಷಣಗಳೂ ಕೂಡ ಭಾರತ ಸರ್ಕಾರದ ವತಿಯಿಂದ ಕಾಣುತ್ತಿದ್ದೇವೆ  ಎಂದು ಮರ್ರೇ ಹೇಳಿದ್ದಾರೆ.
ಡಿಜಿಟಲೀಕರಣ ಮತ್ತು ಡಿಜಿಟಲ್ ಬ್ಯಾಕಿಂಗ್ ಭಾರತದ ಆರ್ಥಿಕತೆ ಉತ್ತೇಜನ ನೀಡಲಿದ್ದು, ಪರಿಣಾಮಕಾರಿ ಹಾಗೂ ಸಮರ್ಥ ಪಾವತಿ ವ್ಯವಸ್ಥೆಯಾಗಲಿದೆ ಎಂದು ಮರ್ರೆ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.