2,000 ರೂಪಾಯಿಗಳವರೆಗಿನ ಡೆಬಿಟ್ ಕಾರ್ಡ್ ವಹಿವಾಟಿಗೆ ಶುಲ್ಕ ಇಲ್ಲ!
ಡಿಜಿಟಲ್ ಪೇಮೆಂಟ್ ಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ 2,000 ರೂಪಾಯಿಗಳವರೆಗಿನ ಡೆಬಿಟ್ ಕಾರ್ಡ್ ವಹಿವಾಟಿಗೆ ವಿಧಿಸಲಾಗುವ ಶುಲ್ಕವನ್ನು ರದ್ದುಗೊಳಿಸಿದೆ.

Published On :
ನವದೆಹಲಿ: ಡಿಜಿಟಲ್ ಪೇಮೆಂಟ್ ಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ 2,000 ರೂಪಾಯಿಗಳವರೆಗಿನ ಡೆಬಿಟ್ ಕಾರ್ಡ್ ವಹಿವಾಟಿಗೆ ವಿಧಿಸಲಾಗುವ ಶುಲ್ಕವನ್ನು ರದ್ದುಗೊಳಿಸಿದೆ.
2000 ರೂಪಾಯಿ ವರೆಗಿನ ಎಲ್ಲಾ ಡೆಬಿಟ್ ಕಾರ್ಡ್/ಭೀಮ್ ಯುಪಿಐ/ಎಇಪಿಎಸ್ ವಹಿವಾಟುಗಳಿಗೆ ಎಂಡಿಆರ್ ಶುಲ್ಕವನ್ನು ತೆಗೆದುಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದ್ದು, ಈ ಮೊತ್ತಕ್ಕೆ ವಿಧಿಸಲಾಗುತ್ತಿದ್ದ ಎಂಡಿಆರ್ ನ್ನು ಜ.1 ರಿಂದ ಕೇಂದ್ರ ಸರ್ಕಾರವೇ ಭರಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಡಿಜಿಟಲ್ ಪೇಮೆಂಟ್ ಗಳನ್ನು ಉತ್ತೇಜಿಸುವುದಕ್ಕೆ ಸಣ್ಣ ಹಾಗೂ ಬೃಹತ್ ವ್ಯಾಪಾರಿಗಳಿಗೆ ಆರ್ ಬಿಐ ಎಂಡಿಆರ್ ದರಗಳನ್ನು ವಿಧಿಸಿತ್ತು. ಈ ಪ್ರಕಾರ ಪ್ರತಿ ಪಿಒಎಸ್ ಅಥವಾ ಆನ್ ಲೈನ್ ವಹಿವಾಟಿಗೆ 200 ರೂಪಾಯಿಗಳಷ್ಟು ಮಿತಿಯಲ್ಲಿ ವಾರ್ಷಿಕ 20 ಲಕ್ಷ ವಹಿವಾಟು ನಡೆಸುವವರಿಗೆ ಶೇ.0.40 ಯಷ್ಟು ಎಂಡಿಆರ್ ಶುಲ್ಕ ವಿಧಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


