ಗುಜರಾತ್ ಚುನಾವಣೋತ್ತರ ಸಮೀಕ್ಷಾ ವರದಿ: ಸೆನ್ಸೆಕ್ಸ್, ರೂಪಾಯಿ ಮೌಲ್ಯ ಏರಿಕೆ
ಗುಜರಾತ್ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಅಂತ್ಯವಾದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷಾ ವರದಿಗಳು ಬಿಜೆಪಿ ಪಕ್ಷದ ಪರವಾಗಿರುವ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ಕೂಡ ಚೇತೋಹಾರಿ ಬೆಳವಣಿಗೆ ಕಂಡಿದೆ.

Published On :
ಮುಂಬೈ: ಗುಜರಾತ್ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಅಂತ್ಯವಾದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷಾ ವರದಿಗಳು ಬಿಜೆಪಿ ಪಕ್ಷದ ಪರವಾಗಿರುವ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ಕೂಡ ಚೇತೋಹಾರಿ ಬೆಳವಣಿಗೆ ಕಂಡಿದೆ.
ಅತ್ತ ಗುಜರಾತ್ ನಲ್ಲಿ ಅಂತಿಮದ ಹಂತದ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿರುವಂತೆಯೇ ಇತ್ತ ಮುಂಬೈ ಷೇರುಮಾರುಕಟ್ಟೆ ದಿನದ ವಹಿವಾಟು ಅಂತ್ಯಕ್ಕೆ ಶೇ.0.59 ಅಥವಾ 193.66 ಅಂಕಗಳ ಏರಿಕೆ ಕಂಡಿದೆ. ಆ ಮೂಲಕ ಸೆನ್ಸೆಕ್ಸ್ 33,246.70 ಅಂಕಕ್ಕೆ ಏರಿಕೆಯಾಗಿದ್ದು, ನಿಫ್ಟಿ ಕೂಡ 59.15 ಅಂಕಗಳ ಏರಿಕೆಯೊಂದಿಗೆ 10,252.10ಅಂಕಗಳಿಗೆ ಏರಿಕೆ ಕಂಡಿದೆ. ಪ್ರಮುಖವಾದಿ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸುತ್ತದೆ ಎಂಬ ಆಶಾಭಾವ ಷೇರುಮಾರುಕಟ್ಟೆ ಉಂಟಾದ ಪರಿಣಾಮ ಹೂಡಿಕೆದಾರರು ಸಕಾರಾತ್ಮಕವಾಗಿ ಹೂಡಿಕೆ ಮಾಡಿರುವುದೇ ಇಂದಿನ ಚೇತರಿಕೆಗೆ ಕಾರಣ ಎನ್ನಲಾಗಿದೆ.
ಪ್ರಮುಖವಾಗಿ ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ಕ್ಷೇತ್ರ, ವೈದ್ಯಕೀಯ ಸಂಸ್ಥೆಗಳು ಮತ್ತು ಗ್ರಾಹಕ ಉಪಯೋಗಿ ಕ್ಷೇತ್ರಗಳು ಹೆಚ್ಚೆಚ್ಚು ಲಾಭ ಗಳಿಸಿದ್ದು, ಆಕ್ಸಿಸ್ ಬ್ಯಾಂಕ್ ನ ಷೇರು ಮೌಲ್ಯದಲ್ಲಿ ಶೇ.1.24ಏರಿಕೆಯಾಗಿದ್ದು, ಐಟಿಸಿ, ಸಿಪ್ಲಾ, ಎಂ ಅಂಡ್ ಎಂ ಮತ್ತು ಡಾ.ರೆಡ್ಡೀಸ್ ಸಂಸ್ಥೆಗಳ ಷೇರು ಮೌಲ್ಯದಲ್ಲಿ ಏರಿಕೆಯಾಗಿದೆ.
ಡಾಲರ್ ಎದುರು ರುಪಾಯಿ ಮೌಲ್ಯ ಏರಿಕೆ
ಇನ್ನು ಷೇರುಮಾರುಕಟ್ಟೆ ಏರಿಕೆ ಬೆನ್ನಲ್ಲೇ ಭಾರತೀಯ ರೂಪಾಯಿ ಮೌಲ್ಯದಲ್ಲಿಯೂ ಕೂಡ ಚೇತರಿಕೆ ಕಂಡುಬಂದಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಶೇ.0.15ರಷ್ಟು ಏರಿಕೆ ಕಂಡುಬಂದಿದೆ. ಬುಧವಾರದ ಮಾರುಕಟ್ಟೆ ಅಂತ್ಯದ ವೇಳೆ 64.44ರಷ್ಟಿದ್ದ ರೂಪಾಯಿ ಮೌಲ್ಯ ಇಂದಿನ ವಹಿವಾಟು ಅಂತ್ಯದ ಹೊತ್ತಿಗೆ 64.35ಕ್ಕೆ ಏರಿಕೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiಮುಂಬೈSensexಸೆನ್ಸೆಕ್ಸ್ಷೇರು ಮಾರುಕಟ್ಟೆshare marketGujarat Assembly electionಗುಜರಾತ್ ವಿಧಾನಸಭೆ ಚುನಾವಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


