ಸಲೀಲ್ ಪರೇಖ್ ಇನ್ಫೋಸಿಸ್ ನ ನೂತನ ಸಿಇಒ, ಎಂಡಿ
ಇನ್ಫೋಸಿಸ್ ನ ನೂತನ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ನಿರ್ದೇಶಕರನ್ನಾಗಿ ಸಲೀಲ್ ಪರೇಖ್ ನೇಮಕ ಮಾಡಲಾಗಿದೆ. ಜ.2, 2018 ರಿಂದ ಸಲೀಲ್ ಪರೇಖ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸಂಸ್ಥೆ

Published On :
ಬೆಂಗಳೂರು: ಇನ್ಫೋಸಿಸ್ ನ ನೂತನ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ನಿರ್ದೇಶಕರನ್ನಾಗಿ ಸಲೀಲ್ ಪರೇಖ್ ನೇಮಕ ಮಾಡಲಾಗಿದೆ. ಜ.2, 2018 ರಿಂದ ಸಲೀಲ್ ಪರೇಖ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಐಟಿ ಉದ್ಯಮದ ಕ್ಷೇತ್ರದಲ್ಲಿ 3 ದಶಕಗಳಷ್ಟು ಅನುಭವ ಹೊಂದಿರುವ ಸಲೀಲ್ ಪರೇಖ್ ಇನ್ಫೋಸಿಸ್ ಗೆ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ನಿರ್ದೇಶಕರಾಗಿ ನೇಮಕವಾಗಿರುವುದನ್ನು ತಿಳಿಸಲು ಹರ್ಷಿಸುತ್ತೇವೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಫ್ರೆಂಚ್ ಐಟಿ ಕಂಪೆನಿ ಕ್ಯಾಪ್‌ಜೆಮಿನಿಯ ಎಕ್ಸ್‌ಕ್ಯೂಟಿವ್ ಬೋರ್ಟ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಪರೇಖ್, ಅತ್ಯುತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದು, ವ್ಯವಹಾರವನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ್ ನೀಲೇಕಣಿ ಹೇಳಿದ್ದಾರೆ. ಹಾಲಿ ಯು.ಬಿ.ಪ್ರವೀಣ್ ರಾವ್ ಅವರು ಸಿಇಓ ಮತ್ತು ಎಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಅವರ ಅಧಿಕಾರಾವಧಿ 2018 ರ ಜ.2 ಕ್ಕೆ ಅಂತ್ಯವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


