ಇನ್ಫೋಸಿಸ್ ಫೌಂಡೇಷನ್ ತೊರೆದ ವಿಶಾಲ್ ಸಿಕ್ಕಾ ಪತ್ನಿ ವಂದನಾ
ಇನ್ಫೋಸಿಸ್ ಸಿಇಒ ಹುದ್ದೆಗೆ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿಕ್ಕಾ ಪತ್ನಿ ವಂದನಾ ಇನ್ಫೋಸಿಸ್ ಫೌಂಡೇಷನ್ ನಿಂದ ಹೊರಬಂದಿದ್ದಾರೆ.

Published On :
ಇನ್ಫೋಸಿಸ್ ಸಿಇಒ ಹುದ್ದೆಗೆ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿಕ್ಕಾ ಪತ್ನಿ ವಂದನಾ ಇನ್ಫೋಸಿಸ್ ಫೌಂಡೇಷನ್ ನಿಂದ ಹೊರಬಂದಿದ್ದಾರೆ.
ಅಮೆರಿಕದಲ್ಲಿರುವ ಇನ್ಫೋಸಿಸ್ ನ ಸಾಮಾಜಿಕ ವಿಭಾಗದ ಅಧ್ಯಕ್ಷೆಯಾಗಿದ್ದ ವಂದನಾ ಸಿಕ್ಕಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಇನ್ಫೋಸಿಸ್ ಫೌಂಡೇಷನ್, ಯುಎಸ್ಎಗೆ ರಾಜೀನಾಮೆ ನೀಡುತ್ತಿರುವುದಾಗಿ ವಂದನಾ ಸಿಕ್ಕಾ ಹೇಳಿದ್ದಾರೆ.
ವಂದನಾ ಸಿಕ್ಕಾ ರಾಜೀನಾಮೆ ಪತ್ರವನ್ನು ಬ್ಲಾಗ್ ನಲ್ಲಿಯೂ ಹಂಚಿಕೆ ಮಾಡಿಕೊಂಡಿದ್ದಾರೆ. ಕಳೆದ 2 ವರೆ ವರ್ಷಗಳಿಂದ ವಂದನಾ ಸಿಕ್ಕಾ ಯುಎಸ್ ಇನ್ಫೋಸಿಸ್ ಫೌಂಡೇಷನ್ ನ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದು, ಇನ್ಫೋಸಿಸ್ ಸೇರುವುದಕ್ಕೂ ಮುನ್ನ ಸ್ಟಾಟ್ ಅಪ್ ನ್ನು ಪ್ರಾರಂಭಿಸಲು ಮುಂದಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Infosysಇನ್ಫೋಸಿಸ್Vishal Sikkaವಿಶಾಲ್ ಸಿಕ್ಕಾInfosys foundationVandana Sikkaವಂದನಾ ಸಿಕ್ಕಾಇನ್ಫೋಸಿಸ್ ಫೌಂಡೇಷನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


