ಎಸ್ ಬಿಐ ಸಾಲದ ಮೇಲಿನ ಪ್ರಕ್ರಿಯೆ ಶುಲ್ಕ "ತಾತ್ಕಾಲಿಕ" ರದ್ದು!
ಮಹತ್ವದ ಬೆಳವಣಿಗೆಯಲ್ಲಿ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ ಬಿಐ) ಸಾಲದ ಮೇಲಿನ ಪ್ರೊಸೆಸಿಂಗ್ ಫೀ (ಪ್ರಕ್ರಿಯೆ ಶುಲ್ಕ)ಯನ್ನು ಶೇ. 100ರಷ್ಟು ರದ್ದುಗೊಳಿಸಿದೆ.

ಮುಂಬೈ: ಮಹತ್ವದ ಬೆಳವಣಿಗೆಯಲ್ಲಿ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ ಬಿಐ) ಸಾಲದ ಮೇಲಿನ ಪ್ರೊಸೆಸಿಂಗ್ ಫೀ (ಪ್ರಕ್ರಿಯೆ ಶುಲ್ಕ)ಯನ್ನು ಶೇ. 100ರಷ್ಟು ರದ್ದುಗೊಳಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಗೌರಿಗಣೇಶ ಹಬ್ಬದ ಸಿಹಿಸುದ್ದಿ ನೀಡಿದ್ದು, ಸಾಲಗಳ ಮೇಲಿನ ಪ್ರೊಸೆಸಿಂಗ್ ಶುಲ್ಕವನ್ನು ಶೇ.100ರಷ್ಟು ಕಡಿತ ಮಾಡುವುದಾಗಿ ಘೋಷಿಸಿದೆ. ಕಾರ್ ಲೋನ್, ಗೋಲ್ಡ್ ಲೋನ್ ಸೇರಿದಂತೆ ಇತರ ವೈಯಕ್ತಿಕ ಸಾಲಗಳಿಗೆ ಬ್ಯಾಂಕ್ ವಿಧಿಸುತ್ತಿದ್ದ ಪ್ರೊಸೆಸಿಂಗ್ ಫೀಯನ್ನು ಡಿಸೆಂಬರ್ 31 2017ರವಗೂ ವಿಧಿಸುವುದಿಲ್ಲ ಎಂದು ಎಸ್ ಬಿಐ ಪ್ರಕಟಿಸಿದೆ.
ಮೂಲಗಳ ಪ್ರಕಾರ 2017ರ ಡಿಸೆಂಬರ್ 31ರವರೆಗೆ ಪಡೆಯುವ ಕಾರ್ ಲೋನ್ ಅರ್ಜಿಗಳಿಗೆ ಮಾತ್ರ ಈ ಕೊಡುಗೆ ಅನ್ವಯವಾಗಲಿದ್ದು, ಬ್ಯಾಂಕ್ ನೀಡುವ ವೈಯಕ್ತಿಕ ಸಾಲ “ಎಕ್ಸ್ ಪ್ರೆಸ್ ಕ್ರೆಡಿಟ್” ಮೇಲೆ ಸೆಪ್ಟೆಂಬರ್ 30ರವರೆಗೆ ಶೇ.50ರಷ್ಟು ಶುಲ್ಕ ಕಡಿತ ಮಾಡಲಾಗುತ್ತದೆ. ಅಂತೆಯೇ ಅಕ್ಟೋಬರ್ 31ರವರೆಗೆ ಚಿನ್ನದ ಸಾಲದ ಮೇಲಿನ ಶೇ.50ರಷ್ಟು ಪ್ರೊಸೆಸಿಂಗ್ ಫೀಯನ್ನು ರದ್ದುಗೊಳಿಸಲಾಗಿದೆ ಎಂದು ಎಸ್ ಬಿಐ ಪ್ರಕಟಿಸಿದೆ.
ಈ ಹಿಂದೆ ಉಳಿತಾಯ ಖಾತೆಗಳಲ್ಲಿನ ಹಣದ ಬಡ್ಡಿದರ ಇಳಿಕೆ ಮಾಡುವ ಮೂಲಕ ಗ್ರಾಹಕರಿಗೆ ತಲೆಬಿಸಿ ಮಾಡಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ತನ್ನ ಗ್ರಾಹಕರಿಗೆ ಕೊಂಚ ಸಮಾಧಾನಕರ ಸುದ್ದಿ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


