ಸಿಕ್ಕಾ ರಾಜಿನಾಮೆ ಎಫೆಕ್ಟ್: ಗ್ರಾಹಕರಿಂದ ಷೇರು ಖರೀದಿಗೆ ಮುಂದಾದ ಇನ್ಫೋಸಿಸ್
ಜಾಗತಿಕ ಸಾಫ್ಟ್ವೇರ್ ಸಂಸ್ಥೆ ಇನ್ಫೋಸಿಸ್ ಲಿಮಿಟೆಡ್ ಶನಿವಾರ ಟೆಂಡರ್ ಆಫರ್ ಮೂಲಕ 11.3 ಕೋಟಿ ರೂ. ಮೌಲ್ಯದ ಷೇರುಗಳನ್ನು .ಹಿಂಪಡೆಯುವುದಾಗಿ ಘೋಷಿಸಿದೆ.
Published On :
ಬೆಂಗಳೂರು: ಜಾಗತಿಕ ಸಾಫ್ಟ್ವೇರ್ ಸಂಸ್ಥೆ ಇನ್ಫೋಸಿಸ್ ಲಿಮಿಟೆಡ್ ಶನಿವಾರ ಟೆಂಡರ್ ಆಫರ್ ಮೂಲಕ 11.3 ಕೋಟಿ ರೂ. ಮೌಲ್ಯದ ಷೇರುಗಳನ್ನು .ಹಿಂಪಡೆಯುವುದಾಗಿ ಘೋಷಿಸಿದೆ. ಪ್ರತೀ ಷೇರಿಗೆ 1,150 ರೂ.ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ಫೋಸಿಸ್ ಸಂಸ್ಥೆಯ ಸಿಇಒ ಆಗಿದ್ದ ವಿಶಾಲ್ ಸಿಕ್ಕಾ ರಾಜಿನಾಮೆ ಬಳಿಕ ಮಾರುಕಟ್ಟೆಯಲ್ಲಿ ಸಂಸ್ಥೆಯ ಷೇರುಗಳ ಮೌಲ್ಯ ಕುಸಿದಿತ್ತು. ಇದರ ಬೆನ್ನಲ್ಲೇ ಸಂಸ್ಥೆಯ ಆಡಳಿತ ಮಂಡಳಿಯು ತನ್ನ ಹೂಡಿಕೆದಾರರಿಂದ 11.3 ಕೋಟಿ ಈಕ್ವಿಟಿ ಷೇರುಗಳನ್ನು ಹಿಂಪಡೆಯಲು ನಿರ್ಧರಿಸಿದ್ದು ರೂ. 5 ಮುಖಬೆಲೆಯ ಷೇರಿಗೆ ರೂ.1,150 ನೀಡಲು ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ. ಆದರೆ ಅಂತಿಮವಾಗಿ ಸಂಸ್ಥೆಯ ಸಂಗ್ರಹವು 13,000 ಕೋಟಿ ರೂ.ಮೀರುವುದಿಲ್ಲ ಎಂದೂ ಸಂಸ್ಥೆ ಭಾರತೀಯ ಷೇರುಮಾರುಕಟ್ಟೆ ಬಿಎಸ್ ಇಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ.

ಕೊಡುಗೆಯು ಒಟ್ಟು ಪಾವತಿಯ ಶೇ. 20.51 ರಷ್ಟು ಇದ್ದು, ಇದು 11.3 ಕೋಟಿ ಷೇರುಗಳು ಅಥವಾ ಶೇ 4.92 ಷೇರುಗಳ ಮೊತ್ತವನ್ನು (ಯಾವುದೇ ಒಂದನ್ನು) ಒಳಗೊಂಡಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.