ಸಿಕ್ಕಾ ರಾಜೀನಾಮೆ ಬೆನ್ನಲ್ಲೇ 208 ಅಂಕ ಕುಸಿತ ಕಂಡ ಸೆನ್ಸೆಕ್ಸ್
ಮುಂಬೈ ಷೇರು ಮರುಕಟ್ಟೆ ಬಿಎಸ್ ಇ ಇಂದಿನ ದಿನದ ಪ್ರಾರಂಭಿಕ ವಹಿವಾಟಿನಲ್ಲಿ 208 ಅಂಕಗಳ ಕುಸಿತ ದಾಖಲಿಸಿದೆ.

Published On :
ಮುಂಬೈ :ಮುಂಬೈ ಷೇರು ಮರುಕಟ್ಟೆ ಬಿಎಸ್ ಇ ಇಂದಿನ ದಿನದ ಪ್ರಾರಂಭಿಕ ವಹಿವಾಟಿನಲ್ಲಿ 208 ಅಂಕಗಳ ಕುಸಿತ ದಾಖಲಿಸಿದೆ. ಇನ್ಫೋಸಿಸ್ ಆರಂಭಿಕ ವಹಿವಾಟಿನಲ್ಲಿ ಶೇ 7 ರಷ್ಟು ಕುಸಿತ ಉಂತಾಗಿದೆ. ಇನ್ಫೋಸಿಸ್ ಎಂಡಿ ಮತ್ತು ಸಿಇಒ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ್ದರ ಪರಿಣಾಮವಾಗಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರ್ಥಿಕ ನೀತಿಯೂ ಹೂಡಿಕೆದಾರರನ್ನು ಷೇರು ಹೂಡಿಕೆಯಿಂದ ಹಿಂದೆ ಸರಿಯುವಂತೆ ಮಾಡಿದೆ ಎನ್ನಲಾಗುತ್ತಿದೆ.
ಸೆನ್ಸೆಕ್ಸ್ 207.75 ಪಾಯಿಂಟ್ ಅಥವಾ ಶೇಕಡ 0.65 31,ಕ್ಕೆ ಇಳಿಕೆಯಾಗಿದೆ. ಐಟಿ, ಟೆಕ್, ಬ್ಯಾಂಕ್, ಆರೋಗ್ಯ, ಲೋಹ, ಆಟೋ ಮತ್ತು ರಿಯಾಲ್ಟಿಗಳು 2.43 ಶೇಕಡಕ್ಕೆ ಕುಸಿದಿದೆ. ಇದೇ ರೀತಿಯಾಗಿ ರಾಷ್ಟ್ರೀಯ ಷೇರು ವಿನಿಮಯ ಸೂಚ್ಯಂಕ ನಿಫ್ಟಿ 73.95 ಪಾಯಿಂಟ್ ಕ್ಕೆ ಇಳಿದಿದೆ.
ಸನ್ ಫಾರ್ಮಾ, ಎಚ್ಡಿಎಫ್ಸಿ ಲಿಮಿಟೆಡ್, ಟಾಟಾ ಮೋಟಾರ್ಸ್, ಎಸ್ಬಿಐ, ಕೊಟಾಕ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಲುಪಿನ್, ಅದಾನಿ ಬಂದರುಗಳು, ಆಕ್ಸಿಸ್ ಬ್ಯಾಂಕ್, ಡಾ. ರೆಡ್ಡೀಸ್, ಕೋಲ್ ಇಂಡಿಯಾ ಮತ್ತು ಟಾಟಾ ಸ್ಟೀಲ್ ಪ್ರಮುಖವಾದ ಸೂಚ್ಯಂಕಗಳನ್ನು ಕೆಳಕ್ಕಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
SensexBSEಸೂಚ್ಯಂಕDonald Trumpಡೊನಾಲ್ಡ್ ಟ್ರಂಪ್ವಿಶಾಲ್ ಸಿಕ್ಕಾInfosys Crisisಇನ್ಫೋಸಿಸ್ ಬಿಕ್ಕಟ್ಟುishal Sikkaಬಿಎಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


