ಈಶಾನ್ಯ ಹಾಗೂ ಹಿಮಾಲಯ ರಾಜ್ಯಗಳ ಕೈಗಾರಿಕೆಗೆ ತೆರಿಗೆ ವಿನಾಯಿತಿ ಮುಂದುವರಿಕೆ: ಜೇಟ್ಲಿ
ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯ ರಾಜ್ಯಗಳ ಕೈಗಾರಿಕೆಗಳು ಮಾರ್ಚ್ 2027 ರ ವರೆಗೆ ತೆರಿಗೆ ವಿನಾಯಿತಿ ಪಡೆಯಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೆಟ್ಲಿ ತಿಳಿಸಿದ್ದಾರೆ.
Published On :
ನವದೆಹಲಿ: ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯ ರಾಜ್ಯಗಳ ಕೈಗಾರಿಕೆಗಳು ಮಾರ್ಚ್ 2027 ರ ವರೆಗೆ ತೆರಿಗೆ ವಿನಾಯಿತಿ ಪಡೆಯಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೆಟ್ಲಿ ತಿಳಿಸಿದ್ದಾರೆ.
ಜುಲೈ 1 ರಿಂದ ಜಾರಿಗೆ ಬಂದ ಜಿಎಸ್ ಟಿ ತೆರಿಗೆ ಸಹ ಮರುಪಾವತಿ ಆಗುವಂತೆ ಈ ತೆರಿಗೆ ವಿನಾಯಿತಿ ಇರಲಿದೆ.
"ಜಿಎಸ್ಟಿ ಕಾಯ್ದೆಯ ಚೌಕಟ್ಟಿನೊಳಗೆ, ಪ್ರತಿ ಉದ್ಯಮವು ಈ ನಿರ್ದಿಷ್ಟ ಅವಧಿಯಲ್ಲಿ (ಮಾರ್ಚ್ 31, 2027) ತನ್ನದೇ ಆದ ಮರುಪಾವತಿ ವ್ಯವಸ್ಥೆಗೆ ಅರ್ಹತೆ ಪಡೆಯುತ್ತದೆ "ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯ ಬಳಿಕ ಬಳಿಕ ಅವರು ಹೇಳಿದ್ದಾರೆ.
ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯ ರಾಜ್ಯಗಳಾದ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ್ ಈ ತೆರಿಗೆ ವಿನಾಯಿತಿ ಪಡೆಯುವ ಅರ್ಹ ರಾಜ್ಯಗಳಾಗಿವೆ. ಈ ಯೋಜನೆಯ ಪ್ರಕಾರ, ಉದ್ಯಮಗಳು 10 ವರ್ಷಗಳ ಕಾಲ ಅಬಕಾರಿ ತೆರಿಗೆ ವಿನಾಯಿತಿಯನ್ನು ಪಡೆಯಲಿವೆ ಎಂದು ಜೇಟ್ಲಿ ಮಾಹಿತಿ ನೀಡಿದ್ದಾರೆ.
ಹೊಸದಾಗಿ ಜಾರಿಗೆ ಬಂದ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಯಲ್ಲಿ ತೆರಿಗೆ ವಿನಾಯಿತಿಗೆ ಯಾವುದೇ ನಿಬಂಧನೆ ಇಲ್ಲ. ಈ ಕೈಗಾರಿಕೆಗಳಿಗೆ ತೆರಿಗೆ ಮರುಪಾವತಿಗೆ ಡಿಬಿಟಿ ಮೂಲಕ ಅನುಮತಿ ನೀಡಲಾಗುವುದು ಈ ವಿನಾಯಿತಿಯ ಷರತ್ತು 2027 ಕ್ಕೆ ಮುಗಿಯಲಿದ್ದು ಒಟ್ಟು 4,284 ಕೈಗಾರಿಕೆಗಳು ಈ ಯೋಜನೆಯ ಅನುಕೂಲ ಪಡೆಯಲಿದೆ. ಒಟ್ತಾರೆ ಯೋಜನೆ 27,413 ಕೋಟಿ ರೂ.ಬಜೆಟ್ ಗಾತ್ರವನ್ನು ಹೊಂದಿದೆ ಎಂದು ಜೇಟ್ಲಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Arun Jaitleytax exemptionಅರುಣ್ ಜೆಟ್ಲಿNortheastಈಶಾನ್ಯ ರಾಜ್ಯಗಳುHimalayan statesGST Actತೆರಿಗೆ ವಿನಾಯಿತಿಜಿಎಸ್ಟಿ ಕಾಯ್ದೆಹಿಮಾಲಯ ರಾಜ್ಯಗಳು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

