ಕಾರ್ಮಿಕರಿಗೆ ಸಂತಸದ ಸುದ್ದಿ: ಇನ್ನು ಮುಂದೆ ನೌಕರಿ ಜೊತೆಗೆ ಪಿಎಫ್ ಖಾತೆಯೂ ವರ್ಗಾವಣೆ
ಮುಂದಿನ ದಿನಗಳಲ್ಲಿ ನೀವು ಉದ್ಯೋಗ ಬದಲಾಯಿಸಿದರೇ ಪಿಎಫ್ ಬಗ್ಗೆ ಯೋಚಿಸುವಂತಿಲ್ಲ, ಏಕೆಂದರೇ ಇನ್ನು ಮುಂದೆ ನಿಮ್ಮ ನೌಕರಿಯ ಜೊತೆಗೆ, ನಿಮ್ಮ ಪಿಎಫ್ ...

Published On :
ನವದೆಹಲಿ: ಮುಂದಿನ ದಿನಗಳಲ್ಲಿ ನೀವು ಉದ್ಯೋಗ ಬದಲಾಯಿಸಿದರೇ ಪಿಎಫ್ ಬಗ್ಗೆ ಯೋಚಿಸುವಂತಿಲ್ಲ, ಏಕೆಂದರೇ ಇನ್ನು ಮುಂದೆ ನಿಮ್ಮ ನೌಕರಿಯ ಜೊತೆಗೆ, ನಿಮ್ಮ ಪಿಎಫ್ ಖಾತೆ ಕೂಡ ಸ್ವಯಂ ವರ್ಗಾವಣೆಯಾಗಲಿದೆ.
ಸೆಪ್ಟೆಂಬರ್ ತಿಂಗಳಿನಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ನೀವು ಕೆಲಸ ಬದಲಿಸಿದ ಸಂಸ್ಥೆಗೆ ನಿಮ್ಮ ಹಿಂದಿನ ಕಂಪನಿಯ ಪಿಎಫ್ ಹಣ ವರ್ಗಾವಣೆಯಾಗುತ್ತದೆ.
ಪಿಎಫ್ ಸೇರ್ಪಡೆಗೆ ಆಧಾರ್ ಕಡ್ಡಾಯ ಗೊಳಿಸಲಾಗಿದೆ. ಹೀಗಾಗಿ ಕಾರ್ಮಿಕರು ಅದೇ ಖಾತೆಯನ್ನು ಉಳಿಸಿಕೊಳ್ಳಬಹುದು' ಎಂದು ಭವಿಷ್ಯ ನಿಧಿ ಮುಖ್ಯ ಆಯುಕ್ತ ವಿ.ಪಿ. ಜಾಯ್ ಹೇಳಿದ್ದಾರೆ.
ಒಬ್ಬ ವ್ಯಕ್ತಿ ಉದ್ಯೋಗ ಬದಲಿಸಿದಾಗ ಯಾವುದೇ ಅರ್ಜಿಯ ಅಗತ್ಯವಿಲ್ಲದೆ ಕೇವಲ ಮೂರೇ ದಿನಗಳಲ್ಲಿ ಖಾತೆಯ ವರ್ಗಾವಣೆಯಾಗಲಿದೆ. ಆಧಾರ್ ಐಡಿ ಮತ್ತು ದೃಢೀಕೃತ ಐಡಿ ಹೊಂದಿದ್ದರೆ ಸಾಕು, ಆತ ದೇಶದ ಯಾವುದೇ ಭಾಗಕ್ಕೆ ಹೋದರೂ ಖಾತೆ ವರ್ಗಾವಣೆಯಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


