ವಾಣಿಜ್ಯ

2030ರ ವೇಳೆಗೆ ಬಲಿಷ್ಠ ಆರ್ಥಿಕತೆಯಲ್ಲಿ ಭಾರತಕ್ಕೆ 3ನೇ ಸ್ಥಾನ: ಆರ್ಥಿಕ ಸಮೀಕ್ಷೆ

ಜಪಾನ್‌, ಜರ್ಮನಿ, ಬ್ರಿಟನ್‌ ಹಾಗೂ ಫ್ರಾನ್ಸ್‌ ನಂತಹ ಮುಂದುವರಿದ ದೇಶಗಳನ್ನು ಹಿಂದಿಕ್ಕಿ 2030ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಅಮೆರಿಕದ ಸರ್ಕಾರಿ ಸಂಸ್ಥೆಯೊಂದು ಹೇಳಿದೆ.

2030ರ ವೇಳೆಗೆ ಬಲಿಷ್ಠ ಆರ್ಥಿಕತೆಯಲ್ಲಿ ಭಾರತಕ್ಕೆ 3ನೇ ಸ್ಥಾನ: ಆರ್ಥಿಕ ಸಮೀಕ್ಷೆ
ಸಂಗ್ರಹ ಚಿತ್ರ
Published On :

ನವದೆಹಲಿ: ಜಪಾನ್‌, ಜರ್ಮನಿ, ಬ್ರಿಟನ್‌ ಹಾಗೂ ಫ್ರಾನ್ಸ್‌ ನಂತಹ ಮುಂದುವರಿದ ದೇಶಗಳನ್ನು ಹಿಂದಿಕ್ಕಿ 2030ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಅಮೆರಿಕದ  ಸರ್ಕಾರಿ ಸಂಸ್ಥೆಯೊಂದು ಹೇಳಿದೆ.

ಅಮೆರಿಕದ ಖ್ಯಾತ ಕೃಷಿ ಮ್ತತು ಆರ್ಥಿಕ ಸಂಶೋಧನಾ ಇಲಾಖೆ ಅಭಿಪ್ರಾಯಪಟ್ಟಿರುವಂತೆ ಭಾರತದ ಆರ್ಥಿಕತೆ ಪ್ರತೀ ವರ್ಷ ಚೇತರಿಕೆಯಾಗತ್ತಿದ್ದು, ವಾರ್ಷಿಕ ಶೇ.7.4ರ ಪ್ರಗತಿ ದರದೊಂದಿಗೆ ಭಾರತದ ಆರ್ಥಿಕತೆ 2030ರೊಳಗೆ  440 ಲಕ್ಷ ಕೋಟಿ ರು.ಗೆ ಏರಲಿದೆ ಎಂದು ಅಭಿಪ್ರಾಯಪಟ್ಟಿದೆ. ಆ ಮೂಲಕ ಭಾರತ 2030ರ ವೇಳೆ ವಿಶ್ವದ ಮೂರನೇ ಬಲಿಷ್ಠ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಲಿದ್ದು, ಅಮೆರಿಕ ಈಗಿನಂತೆ ಮೊದಲ ಸ್ಥಾನದಲ್ಲೇ ಮುಂದುವ  ರಿಯಲಿದೆ. ಏರಡನೇ ಸ್ಥಾನವನ್ನು ಚೀನಾ ಅಲಂಕರಿಸಲಿದೆ ಎಂದು ಹೇಳಿದೆ.

2030ರ ವೇಳೆಗೆ ಆ ದೇಶದ ಆರ್ಥಿಕ ಶಕ್ತಿ 1600 ಲಕ್ಷ ಕೋಟಿ ರು.ಗೆ ಏರಲಿದೆ. 1091 ಕೋಟಿ ರು. ಜಿಡಿಪಿ ಹೊಂದಿರುವ ಅಮೆರಿಕ ಶೇ.2.1ರ ಪ್ರಗತಿ ದರವನ್ನು ಕಾಯ್ದುಕೊಳ್ಳಲಿದೆ. ಶೇ.5.4ರ ಪ್ರಗತಿಯೊಂದಿಗೆ ಚೀನಾದ  ಆರ್ಥಿಕತೆ 2030ರೊಳಗೆ 1235 ಕೋಟಿ ರು.ಗೆ ಏರಿಕೆಯಾಗಲಿದೆ. ಸದ್ಯ ಅದು ಅದು 600 ಲಕ್ಷ ಕೋಟಿ ರು. ಹೊಂದಿದೆ ಎಂದು ತಿಳಿಸಿದೆ. ಅಂತೆಯೇ ಭಾರತ ಜಪಾನ್‌ (409 ಲಕ್ಷ ಕೋಟಿ ರು.) ಹಾಗೂ ಜರ್ಮನಿ (281 ಲಕ್ಷ  ಕೋಟಿ ರು.)ಯನ್ನು ಹಿಂದಿಕ್ಕಲಿದ್ದು, ಭಾರತದ ಬೆಳವಣಿಗೆ ದರವು ಮುಂದಿನ 15 ವರ್ಷಗಳಲ್ಲಿ ಬ್ರಿಟನ್‌ (231 ಲಕ್ಷ ಕೋಟಿ ರು.) ಹಾಗೂ ಫ್ರಾನ್ಸ್‌ (221 ಲಕ್ಷ ಕೋಟಿ ರು.) ಗಿಂತ ಹೆಚ್ಚೂ ಕಡಿಮೆ ದುಪ್ಪಟ್ಟು ಇರಲಿದೆ ಎಂದು ಅಮೆರಿಕದ  ಕೃಷಿ ಆರ್ಥಿಕ ಸಂಶೋಧನಾ ಸೇವೆಗಳ ಇಲಾಖೆ ಅಂದಾಜಿಸಿದೆ. 2015-16ನೇ ಸಾಲಿನಲ್ಲಿ ಭಾರತದ ಆರ್ಥಿಕತೆ 137 ಲಕ್ಷ ಕೋಟಿ ರು. ಇತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.