ವಾಣಿಜ್ಯ

ಗೂಗಲ್ ಸಿಇಒ ಸುಂದರ್ ಪಿಚೈಗೆ 2016ರಲ್ಲಿ ವೇತನ ದುಪ್ಪಟ್ಟು ಏರಿಕೆ

ಭಾರತೀಯ ಮೂಲದ ಗೂಗಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚ್ಚೈ ಅವರಿಗೆ...

ಗೂಗಲ್ ಸಿಇಒ ಸುಂದರ್ ಪಿಚೈಗೆ 2016ರಲ್ಲಿ ವೇತನ ದುಪ್ಪಟ್ಟು ಏರಿಕೆ
ಸುಂದರ್ ಪಿಚೈ
Published On :
ಹ್ಯೂಸ್ಟನ್: ಭಾರತೀಯ ಮೂಲದ ಗೂಗಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚ್ಚೈ ಅವರ 2016ರ ವೇತನ 2015ರ ವೇತನಕ್ಕೆ ಹೋಲಿಸಿದರೆ ಸಂಪೂರ್ಣ ದುಪ್ಪಟ್ಟಾಗಿದ್ದು 20 ಕೋಟಿ ಡಾಲರ್‌ ನಷ್ಟು ಹೆಚ್ಚಾಗಿದೆ.
ಪಿಚ್ಚೈ ಕಳೆದ ವರ್ಷ 6,50,000 ಅಮೆರಿಕನ್ ಡಾಲರ್ ವೇತನ ಪಡೆದಿದ್ದು,  ಅವರು 2015ರಲ್ಲಿ ಗಳಿಸಿದ 6,52,500 ಅಮೆರಿಕನ್ ಡಾಲರ್ ಗಿಂತ ಸ್ವಲ್ಪ ಕಡಿಮೆಯಾಗಿದೆ. ಅವರು 2015ರಲ್ಲಿ 99.8 ಮಿಲಿಯನ್ ಷೇರು ಅವಾರ್ಡ್ ಗಳಿಸಿದ್ದರು.2015ರ ಆಗಸ್ಟ್‌ನಲ್ಲಿ ಕಂಪೆನಿಯು ಮರು ನೋಂದಾವಣೆಗೊಂಡಾಗ ಸಿಇಓ ಹುದ್ದೆಗೇರಿದ ಪಿಚೈಗೆ 2016ರಲ್ಲಿ 19.87 ಕೋಟಿ ಡಾಲರ್‌  ಮೌಲ್ಯದ ತನ್ನ ಶೇರುಗಳನ್ನು ಕಂಪೆನಿ ನೀಡಿತು. 2015ರಲ್ಲಿ ಪಿಚೈ ಹೊಂದಿದ್ದ 9.98 ಕೋಟಿ ಡಾಲರ್‌ ಮೌಲ್ಯದ ಶೇರುಗಳು ಈ ಮೂಲಕ ದುಪ್ಪಟ್ಟು ಆಯಿತು. 
ಪಿಚ್ಚೈ ಅವರ ಆಡಳಿತಾವಧಿಯಲ್ಲಿ ಗೂಗಲ್ ನ ಮಾರಾಟದಲ್ಲಿ ಜಾಹೀರಾತು ಮತ್ತು ಯೂಟ್ಯೂಬ್ ವಹಿವಾಟು ಸೇರಿ ಏರಿಕೆ ಕಂಡುಬಂದಿದೆ. 2016ರಲ್ಲಿ ಗೂಗಲ್ ಹೊಸ ಸ್ಮಾರ್ಟ್ ಫೋನ್, ವರ್ಚ್ಯುವಲ್ ರಿಯಾಲಿಟಿ ಹೆಡ್ ಸೆಟ್, ರೂಟರ್ ಮತ್ತು ವಾಯ್ಸ್ ಕಂಟ್ರೋಲರ್, ಸ್ಮಾರ್ಟ್ ಸ್ಪೀಕರ್ ನ್ನು ಅನಾವರಣಗೊಳಿಸಿತ್ತು. ಸುಂದರ ಪಿಚೈ ಗೆ ನೀಡಿರುವ ಈ ಭಾರೀ ಮೊತ್ತದ ವೇತನವನ್ನು ಕಂಪೆನಿಯ ವೇತನ ಸಮಿತಿಯು ಸಮರ್ಥಿಸಿಕೊಂಡಿದೆ. ಸಿಇಓ ಆಗಿ ಪಿಚೈ ಅನೇಕ ಯಶಸ್ವೀ ಉತ್ಪನ್ನಗಳನ್ನು ಬಿಡುಗಡೆ ಮಾಡಿರುವುದರಿಂದ ಅವರಿಗೆ ಇಷ್ಟೊಂದು ದೊಡ್ಡ  ಮೊತ್ತದ ವೇತನ ನೀಡುವುದು ಸಮರ್ಥನೀಯವಾಗಿದೆ ಎಂದು ಕಂಪೆನಿ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.