ಇಎಸ್ಐ ಅಮ್ನೆಸ್ಟಿ ಸ್ಕೀಮ್ ಜೂನ್ 30ರವರಗೆ ವಿಸ್ತರಣೆ
ಕಾರ್ಮಿಕರ ರಾಜ್ಯ ವಿಮಾ ನಿಗಮವು ಉದ್ಯೋಗದಾತರು ಮತ್ತು ಉದ್ಯೋಗಿಗಳ ಹೊಸ ನೋಂದಣಿಗಾಗಿ 2016ರ ಡಿಸೆಂಬರ್ ನಲ್ಲಿ ಪ್ರಾರಂಭಿಸಿದ್ದ ಇಎಸ್ಐ ಅಮ್ನೆಸ್ಟಿ ಸ್ಕೀಮ್ ಅನ್ನು...

ಬೆಂಗಳೂರು: ಕಾರ್ಮಿಕರ ರಾಜ್ಯ ವಿಮಾ ನಿಗಮವು ಉದ್ಯೋಗದಾತರು ಮತ್ತು ಉದ್ಯೋಗಿಗಳ ಹೊಸ ನೋಂದಣಿಗಾಗಿ 2016ರ ಡಿಸೆಂಬರ್ ನಲ್ಲಿ ಪ್ರಾರಂಭಿಸಿದ್ದ ಇಎಸ್ಐ ಅಮ್ನೆಸ್ಟಿ ಸ್ಕೀಮ್ ಅನ್ನು ದಿನಾಂಕ 01-04-2017 ರಿಂದ 30-06-2017ರ ವರಗೆ ವಿಸ್ತರಿಸಲಾಗಿದೆ.
2016ರ ಡಿಸೆಂಬರ್ 20ರಂದು ಇಎಸ್ಐ ಪ್ರಾರಂಭಿಸಿದ್ದ ಸ್ಪ್ರೀ (SPREE) ಸ್ಕೀಮ್ ಮಾರ್ಚ್ 31ರವರಗೆ ಚಾಲ್ತಿಯಲ್ಲಿತ್ತು.
ಇಎಸ್ಐ ಕಾಯ್ದೆಯಡಿ ಯಾವುದೇ ಕಾರಣಕ್ಕೆ ಇನ್ನೂ ನೋಂದಣಿ ಮಾಡಿಕೊಳ್ಳದ ಉದ್ಯೋಗದಾತರು, ಯಾವುದೇ ದಂಡ ಪಾವತಿಸದೆ ಈ ಅವಧಿಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಅದೇ ರೀತಿ ಈಗಾಗಲೆ ನೋಂದಣಿ ಮಾಡಿಕೊಂಡಿರುವ ಉದ್ಯೋಗದಾತರು ಬಿಟ್ಟುಹೋಗಿರುವ ಉದ್ಯೋಗಿಗಳ ಹೆಸರನ್ನು ಈ ಅವಧಿಯಲ್ಲಿ ಸೋರಿಸಿಕೊಳ್ಳಬಹುದಾಗಿದೆ ಎಂದು ಇಎಸ್ಐ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


