ಶೀಘ್ರದಲ್ಲೇ ರಿಲಯನ್ಸ್ ಜಿಯೋ ಡಿಟಿಎಚ್ ಸೇವೆ ಆರಂಭ, 90 ದಿನ ಉಚಿತ, ತಿಂಗಳಿಗೆ 180 ರು.
4ಜಿ ಸಿಮ್ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಇದೀಗ ಇದೀಗ ಡಿಟಿಎಚ್ ಸೇವೆ...

Published On :
ನವದೆಹಲಿ: 4ಜಿ ಸಿಮ್ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಇದೀಗ ಇದೀಗ ಡಿಟಿಎಚ್ ಸೇವೆ ಆರಂಭಿಸುವ ಮೂಲಕ ಟೆಲಿವಿಷನ್ ಮಾರುಕಟ್ಟೆಯಲ್ಲೂ ಸಂಚಲನ ಉಂಟು ಮಾಡಲು ಸಿದ್ಧತೆ ನಡೆಸಿದೆ.
ಏಪ್ರಿಲ್ ತಿಂಗಳಲ್ಲೇ ಜಿಯೋ ಡಿಟಿಎಚ್ ಸೇವೆ ಆರಂಭಿಸುವ ಸಾಧ್ಯತೆ ಇದ್ದು, ಈಗಾಗಲೇ ಸೆಟಪ್ ಬಾಕ್ಸ್‌ಗಳು ಸಹ ಸಿದ್ದವಾಗಿದ್ದು, ಈ ಕುರಿತು ಜಿಯೋ ಕೇರ್ ವೆಬ್ ಸೈಟ್ ನಲ್ಲಿ ವಿವರಣೆಯನ್ನೂ ನೀಡಲಾಗಿದೆ.
ಇತರೆ ಡಿಟಿಎಚ್ ಸೇವೆಗಿಂತಲೂ ಜಿಯೋ ಡಿಟಿಎಚ್ ಸೇವೆ ಭಿನ್ನವಾಗಿರಲಿದ್ದು, ಆ್ಯಂಡ್ರಾಯ್ಡ ಸೆಟಪ್ ಬಾಕ್ಸ್ ಅಥವಾ ಆ್ಯಪ್ಪಲ್ ಸೆಟಪ್ ಬಾಕ್ಸ್ ಮೂಲಕ ಡಿಟಿಎಚ್ ಸೇವೆ ಪಡೆಯಬಹುದಾಗಿದೆ. ತಿಂಗಳಿಗೆ 180 ರು. ಗಳ ಕನಿಷ್ಠ ದರದೊಂದಿಗೆ ಆರಂಭವಾಗುವ ವಿವಿಧ ಪ್ಲಾನ್‌ಗಳನ್ನು ಬಳಕೆದಾರರು ಸೇರಿಕೊಳ್ಳಬಹುದಾಗಿದೆ. ಬಳಕೆದಾರರು ತಮ್ಮ ಟಿವಿಯಲ್ಲಿ ರಿಲಯನ್ಸ್ ಪ್ಯಾಕೇಜ್ ಮೂಲಕ ಯಾವುದೇ ಚ್ಯಾನಲ್‌ಗಳನ್ನು ವೀಕ್ಷಿಸಬಹುದಾಗಿದೆ.
ಜಿಯೋ ಸ್ಮಾರ್ಟ್ ಸೆಟಪ್ ಬಾಕ್ಸ್ ಜೊತೆಗೆ ಜಿಯೋ ಬ್ರಾಡ್‌ಬ್ಯಾಂಡ್ ಸಂಪರ್ಕ ನೀಡುವ ಇರಾದೆಯನ್ನು ಸಂಸ್ಥೆ ಹೊಂದಿದ್ದು, ಇದಕ್ಕೆ 1 ಜಿಬಿಪಿಎಸ್ ವರೆಗೆ ಸ್ಟ್ರೀಮಿಂಗ್ ಸ್ಪೀಡ್ ಇರುತ್ತದೆ.
ವರದಿಗಳ ಪ್ರಕಾರ ಡಿಟಿಎಚ್ ಸ್ಯಾಟಲೈಟ್ ಸೇವೆಯನ್ನು ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ವೆಲ್‌ಕಮ್ ಆಫರ್ ಪ್ರಮೋಶನ್ ಮೂಲಕ 90 ದಿನಗಳಿಗೆ ಉಚಿತವಾಗಿ ನೀಡಲಿದೆ.
ಜಿಯೋ ಸೆಟ್ ಟಾಪ್ ಬಾಕ್ಸ್‌ನ ಚಿತ್ರಗಳು ಈಗಾಗಲೇ ಮಾಧ್ಯಮಗಳಿಗೆ ಸೋರಿ ಹೋಗಿವೆ. ಜಿಯೋ ಸ್ಯಾಟಲೈಟ್ ಸೇವೆಯು 50ಕ್ಕೂ ಹೆಚ್ಚು ಎಚ್‌ಡಿ ಚ್ಯಾನಲ್‌ಗಳು ಸೇರಿದಂತೆ 300ಕ್ಕೂ ಹೆಚ್ಚು ಚ್ಯಾನಲ್‌ಗಳನ್ನು ಒಳಗೊಂಡಿರುತ್ತವೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


