ರಿಲಾಯನ್ಸ್ ಜಿಯೋ ವೆಲ್ ಕಮ್ ಆಫರ್ 2017 ರ ಮಾರ್ಚ್ ವರೆಗೆ ಮುಂದುವರಿಕೆ ಸಾಧ್ಯತೆ!
ರಿಲಾಯನ್ಸ್ ಸಂಸ್ಥೆ ಜಿಯೋ ವೆಲ್ ಕಮ್ ಆಫರ್ ನ್ನು 2017 ರ ಮಾರ್ಚ್ ವರೆಗೆ ಮುಂದುವರೆಸುವ ಸಾಧ್ಯತೆ ಇದೆ.

ನವದೆಹಲಿ: ರಿಲಾಯನ್ಸ್ ಸಂಸ್ಥೆ ಜಿಯೋ ವೆಲ್ ಕಮ್ ಆಫರ್ ನ್ನು 2017 ರ ಮಾರ್ಚ್ ವರೆಗೆ ಮುಂದುವರೆಸುವ ಸಾಧ್ಯತೆ ಇದೆ.
ಡಿಸೇಂಬರ್ ವೇಳೆಗೆ ರಿಲಾಯನ್ಸ್ ಸಂಸ್ಥೆ ಜಿಯೋ ವೆಲ್ ಕಮ್ ಆಫರ್ ನ್ನು ಅಂತ್ಯಗೊಳಿಸಲಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ರಿಲಾಯನ್ಸ್ ಜಿಯೋ ವೆಲ್ ಕಮ್ ಆಫರ್ ನ್ನು ಮಾರ್ಚ್ 2017 ರವರೆಗೆ ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜಿಯೋ ನೆಟ್ವರ್ಕ್ ಗುಣಮಟ್ಟ ಬಗ್ಗೆ ಜಿಯೋ ಆಡಳಿತ ಮಂಡಳಿ ಸಂಪೂರ್ಣ ತೃಪ್ತವಾಗುವವರೆಗೂ ಗ್ರಾಹಕರಿಗೆ ಶುಲ್ಕ ವಿಧಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ಜಿಯೋ ಸಂಸ್ಥೆಯ ಕಾರ್ಯತಂತ್ರ ಮತ್ತು ಯೋಜನೆಯ ಮುಖ್ಯಸ್ತಚ್ರಿಂದ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ ನೀಡಿರುವ ವೆಲ್ ಕಮ್ ಆಫರ್ ನ್ನು ಮಾರ್ಚ್ 2017 ರ ವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಜಿಯೋ ಸೇವೆಯನ್ನು ಪ್ರಾರಂಭಿಸಿದ್ದ ವೇಳೆ ಗ್ರಾಹಕರಿಗೆ ಮೂರೂ ತಿಂಗಳ ವರೆಗೆ ಉಚಿತ ನೆಟ್ ಸೇವೆ ನೀಡುವುದಾಗಿ ರಿಲಾಯನ್ಸ್ ಸಂಸ್ಥೆ ಘೋಷಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


