ಬ್ಯಾಂಕಿಂಗ್ ಕ್ಷೇತ್ರದ ಕ್ವಾರ್ಟರ್ ವರದಿ; 200 ಅಂಕ ಏರಿಕೆ ಕಂಡ ಸೆನ್ಸೆಕ್ಸ್
ಬ್ಯಾಂಕಿಂಗ್ ಕ್ಷೇತ್ರದ ಕ್ವಾರ್ಟರ್ ವರದಿ ಹೊರಬೀಳುತ್ತಿದ್ದಂತೆಯೇ ಸೆನ್ಸೆಕ್ಸ್ 200 ಅಂಕಗಳ ಏರಿಕೆ ಕಂಡಿದ್ದು, ನಿಫ್ಟಿ ಕೂಡ 54 ಅಂಕಗಳ ಏರಿಕೆ ಕಂಡಿದೆ.

ಮುಂಬೈ: ಬ್ಯಾಂಕಿಂಗ್ ಕ್ಷೇತ್ರದ ಕ್ವಾರ್ಟರ್ ವರದಿ ಹೊರಬೀಳುತ್ತಿದ್ದಂತೆಯೇ ಸೆನ್ಸೆಕ್ಸ್ 200 ಅಂಕಗಳ ಏರಿಕೆ ಕಂಡಿದ್ದು, ನಿಫ್ಟಿ ಕೂಡ 54 ಅಂಕಗಳ ಏರಿಕೆ ಕಂಡಿದೆ.
ಪ್ರಮುಖವಾಗಿ ಬ್ಯಾಂಕಿಂಗ್ ಕ್ಷೇತ್ರದ ಕ್ವಾರ್ಟರ್ ವರದಿ ಷೇರುಮಾರುಕಟ್ಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದು, ಕ್ವಾರ್ಟರ್ ವರದಿಯಲ್ಲಿನ ಲಾಭಾಂಶದ ಬೆಂಬಲದಿಂದಾಗಿ ಸೆನ್ಸೆಕ್ಸ್ ಏರಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 200 ಅಂಕಗಳ ಏರಿಕೆಯೊಂದಿಗೆ 28,126.21 ಅಂಕಗಳಿಗೆ ಏರಿಕೆಯಾಗಿದ್ದು, ನಿಫ್ಟಿ ಕೂಡ 8,700ರ ಗಡಿ ದಾಟಿ 54 ಅಂಕಗಳ ಏರಿಕೆಯೊಂದಿಗೆ 8, 713 ಅಂಕಗಳಿಗೇರಿದೆ.
ಪ್ರಮುಖವಾಗಿ ಬ್ಯಾಕಿಂಗ್ ಕ್ಷೇತ್ರದ ಷೇರುಗಳ ಹೆಚ್ಚಿನ ಲಾಭಾಂಶ ಕಂಡುಕೊಂಡಿದ್ದು, ಐಸಿಐಸಿಐ ಬ್ಯಾಂಕ್, ಹೆಚ್ ಡಿ ಎಫ್ ಸಿ, ಒಎನ್ ಜಿಸಿ ಹಾಗೂ ಜಿಎಐಎಲ್ ಇಂಡಿಯಾ ಸಂಸ್ಥೆಯ ಷೇರುಗಳ ಮೌಲ್ಯ ಹೆಚ್ಚಾಗಿದೆ. ಆದರೆ ವರ್ಷಾಂತ್ಯದ ಮಾರಾಟ ಒತ್ತಡದಿಂದಾಗಿ ಇಂಧನ, ಐಟಿ ಹಾಗೂ ಔಷಧ ವಲಯಗಳ ಷೇರುಗಳು ಮೌಲ್ಯ ಕಳೆದುಕೊಂಡಿವೆ.=
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


