ಅಮೆರಿಕದಲ್ಲಿ ದರ ಹೆಚ್ಚಳ ಭೀತಿ: ಸೆನ್ಸೆಕ್ಸ್ 439 ಅಂಕ ಕುಸಿತ
ಅಮೆರಿಕದಲ್ಲಿ ದರ ಹೆಚ್ಚಳ ಭೀತಿ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಭಾರಿ ಕುಸಿತಕಂಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 439...

Published On :
ಮುಂಬೈ: ಅಮೆರಿಕದಲ್ಲಿ ದರ ಹೆಚ್ಚಳ ಭೀತಿ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಭಾರಿ ಕುಸಿತಕಂಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 439 ಅಂಕಗಳ ಕುಸಿತ ಕಂಡಿದೆ.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಈ ವರ್ಷಾಂತ್ಯ ತನ್ನ ಬಡ್ಡಿ ದರ ಏರಿಸುವುದು ಬಹುತೇಕ ಖಚಿತವೆಂಬ ಸುಳಿವು ಲಭಿಸಿರುವುದನ್ನು ಅನುಸಿರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು 439.23 ಅಂಕಗಳ ಭಾರೀ ನಷ್ಟದೊಂದಿಗೆ 27,643.11 ಅಂಕಗಳ ಮಟ್ಟದಲ್ಲಿ ಗುರುವಾರದ ವಹಿವಾಟನ್ನು ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 135.35 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 8,573.35 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಜೆ ಆ್ಯಂಡ್ ಕೆ ಬ್ಯಾಂಕ್ ಶೇ.14ರಷ್ಟು ಹಾಗೂ ಟಿಸಿಎಸ್ ಶೇ.2ರಷ್ಟು ಕುಸಿದಿರುವುದು ಗಮನಾರ್ಹವಾಗಿದೆ. ಇದೇ ರೀತಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಶೇ.1.50 ಪ್ರಮಾಣದಲ್ಲಿ ಕುಸಿದಿವೆ.
ಇನ್ನು ಸೆನ್ಸೆಕ್ಸ್ ಕುಸಿತ ಬೆನ್ನಲ್ಲೇ ರುಪಾಯಿ ಮೌಲ್ಯದಲ್ಲಿಯೂ ಕೂಡ ಕುಸಿತ ಕಂಡುಬಂದಿದ್ದು, ರುಪಾಯಿ ಮೌಲ್ಯ ಒಂದೇ ದಿನದಲ್ಲಿ 43 ಪೈಸೆ ಇಳಿಕೆಯಾಗುವುದರೊಂದಿಗೆ ರುಪಾಯಿ ದರ ಪ್ರತೀ ಡಾಲರ್ ಗೆ 66.96 ರು. ಗೆ ಏರಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


