ವಾಣಿಜ್ಯ

ಗ್ಯಾಲೆಕ್ಸಿ ನೋಟ್ 7 ಮೊಬೈಲ್ ಗಳ ಮಾರಾಟ ಶಾಶ್ವತವಾಗಿ ಸ್ಥಗಿತ?

ನೋಟ್ 7 ಸರಣಿಯ ಮೊಬೈಲ್ ಮಾರಾಟವನ್ನು ಶಾಶ್ವತವಾಗಿ ಸ್ಥಗಿತಗೊಳಿಸಲು ಸ್ಯಾಮ್ ಸಾಂಗ್ ನಿರ್ಧರಿಸಿರುವ ಬಗ್ಗೆ ವರದಿಗಳಾಗಿವೆ.

ಗ್ಯಾಲೆಕ್ಸಿ ನೋಟ್ 7 ಮೊಬೈಲ್ ಗಳ ಮಾರಾಟ ಶಾಶ್ವತವಾಗಿ ಸ್ಥಗಿತ?
ಗ್ಯಾಲೆಕ್ಸಿ ನೋಟ್ 7 ಮೊಬೈಲ್ ಗಳ ಮಾರಾಟ ಶಾಶ್ವತವಾಗಿ ಸ್ಥಗಿತ?
Published On :

ಸಿಯೋಲ್: ಸ್ಯಾಮ್ ಸಂಗ್ ತನ್ನ ಗ್ಯಾಲಕ್ಸಿ ನೋಟ್ 7 ಸರಣಿಯ ಮೊಬೈಲ್ ಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗತಗೊಳಿಸಲು ನಿರ್ಧರಿಸಿದೆ ಎಂಬ ವರದಿಗಳು ಪ್ರಕಟವಾದ ಬೆನ್ನಲ್ಲೇ ನೋಟ್ 7 ಸರಣಿಯ ಮೊಬೈಲ್ ಮಾರಾಟವನ್ನು ಶಾಶ್ವತವಾಗಿ ಸ್ಥಗಿತಗೊಳಿಸಲು ಸ್ಯಾಮ್ ಸಾಂಗ್ ನಿರ್ಧರಿಸಿರುವ ಬಗ್ಗೆ ವರದಿಗಳಾಗಿವೆ.

ದಕ್ಷಿಣ ಕೊರಿಯಾದ ಪತ್ರಿಕೆಯ ವರದಿ ಪ್ರಕಾರ ಸ್ಯಾಮ್ ಸಂಗ್ ಸಂಸ್ಥೆ ಗ್ಯಾಲೆಕ್ಸಿ ನೋಟ್ 7 ಸರಣಿಯ ಮೊಬೈಲ್ ಗಳ ಮಾರಾಟವನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದೆ.  ತಾಂತ್ರಿಕ ದೋಷದಿಂದ ಸ್ಫೋಟಗೊಂಡ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಯಾಮ್ ಸಾಂಗ್ ಸಂಸ್ಥೆ  ಬಳಕೆದಾರರಿಗೆ ತಾವು ಖರೀದಿಸಿರುವ ನೋಟ್ 7 ಸರಿಣಿಯ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡುವಂತೆ ಈಗಾಗಲೇ ಸೂಚಿಸಿದೆ. 
ಬಳಕೆದಾರರಿಗೆ ಮೊಬೈಲ್ ಗಳನ್ನು ಬಳಸದಂತೆ ಸೂಚಿಸಿರುವ ಸ್ಯಾಂಗ್ ಸಂಗ್ ಸಂಸ್ಥೆ ನೋಟ್ 7 ಮೊಬೈಲ್ ಬದಲಿಗೆ ಹಣ ಹಿಂತಿರುಗಿಸಲು ಅಥವಾ ಬೇರೆ ಮೊಬೈಲ್ ಎಕ್ಸ್ ಚೈಂಜ್ ಮಾಡಿಕೊಳ್ಳಬಹುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಪತ್ರಿಕಾ ವರದಿಯನ್ನು ಹೊರತುಪಡಿಸಿದರೆ ಸ್ಯಾಮ್ ಸಾಂಗ್ ಸಂಸ್ಥೆ ಪ್ರಕಟಣೆಯಲ್ಲಿ ಗಾಲೆಕ್ಸಿ ನೋಟ್ 7 ಸರಣಿಯ ಮೊಬೈಲ್ ಗಳ ಮಾರಾಟವನ್ನು ಶಾಶ್ವತವಾಗಿ ಸ್ಥಗಿತಗೊಳಿಸುವ ಬಗ್ಗೆ ಮಾಹಿತಿ ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.