ಕೇವಲ 83 ದಿನಗಳಲ್ಲಿ ರಿಲಾಯನ್ಸ್ ಜಿಯೋಗೆ 5 ಮಿಲಿಯನ್ ಗ್ರಾಹಕರು!
ಭಾರೀ ಪ್ರಮಾಣದಲ್ಲಿ ಆರಂಭಿಕ ಆಫರ್ ನೀಡಿರುವ ರಿಲಾಯನ್ಸ್ ಜಿಯೋ ಕೇವಲ 83 ದಿನಗಳಲ್ಲಿ 5 ಕೋಟಿ ಗ್ರಾಹಕರನ್ನು ಸಂಪಾದಿಸುವ ಮೂಲಕ ಹೊಸ ...

ನವದೆಹಲಿ: ಭಾರೀ ಪ್ರಮಾಣದಲ್ಲಿ ಆರಂಭಿಕ ಆಫರ್ ನೀಡಿರುವ ರಿಲಾಯನ್ಸ್ ಜಿಯೋ ಕೇವಲ 83 ದಿನಗಳಲ್ಲಿ 5 ಕೋಟಿ ಗ್ರಾಹಕರನ್ನು ಸಂಪಾದಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.
ಸೆಪ್ಟೆಂಬರ್ 5ರಿಂದ ಇಲ್ಲಿಯವರೆಗೆ ಪ್ರತಿ ನಿಮಿಷಕ್ಕೆ 1000, ದಿನಕ್ಕೆ 6 ಲಕ್ಷ ಗ್ರಾಹಕರನ್ನು ಸಂಪಾದಿಸಿ, 83 ದಿನಗಳಲ್ಲಿ 5ಕೋಟಿ ಗಾಹಕರನ್ನು ಹೊಂದಿದೆ ಎಂದು ತನ್ನ ಪ್ರಕಟಣೆಯಲ್ಲಿ ಕಂಪೆನಿ ಹೇಳಿಕೊಂಡಿದೆ.
ಏರ್‍ಟೆಲ್ ಕಂಪೆನಿ 12 ವರ್ಷದಲ್ಲಿ 5 ಕೋಟಿ ಗ್ರಾಹಕರನ್ನು ಹೊಂದಿದ್ದರೆ, ವೋಡಾಫೋನ್ ಮತ್ತು ಐಡಿಯಾ ಕಂಪೆನಿ ಈ ಸಂಖ್ಯೆ ತಲುಪಲು 13 ವರ್ಷ ತಗೆದುಕೊಂಡಿತ್ತು.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಕಂಪೆನಿ ಡಿ.30ರವರೆಗೆ ವೆಲಕಂ ಆಫರ್ ನೀಡಿದೆ. ಈಗ ಈ ಆಫರನ್ನು ಮಾರ್ಚ್‍ವರೆಗೂ ವಿಸ್ತರಿಸಲು ಕಂಪೆನಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಡಿ.27ರಂದು ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆಯಿದೆ.
ಈ ಹಿಂದೆ ಜಿಯೋ ಉಚಿತ ಕರೆಯನ್ನು ನೀಡುವ ಮೂಲಕ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ನಿಯಮವನ್ನು ಉಲ್ಲಂಘಿಸುತ್ತಿದೆ ಎಂದು ಏರ್‍ಟೆಲ್, ವೋಡಾಫೋನ್ ಕಂಪೆನಿಗಳು ದೂರು ನೀಡಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


