14 ಸಾವಿರ ಉದ್ಯೋಗಕ್ಕೆ ಕತ್ತರಿ: ಎಲ್ ಅಂಡ್ ಟಿ
ಹಣಕಾಸಿನ ಸವಾಲುಗಳ ಕಾರಣದಿಂದಾಗಿ ಎಂಜಿನೀಯರಿಂಗ್ ಕ್ಷೇತ್ರದ ದೈತ್ಯ ಲಾರ್ಸನ್ ಅಂಡ್ ಟೂಬ್ರೊ ಕಂಪನಿ 14 ಸಾವಿರ ನೌಕರರನ್ನು ಕೆಲಸದಿಂದ...

ಮುಂಬಯಿ: ಹಣಕಾಸಿನ ಸವಾಲುಗಳ ಕಾರಣದಿಂದಾಗಿ ಎಂಜಿನೀಯರಿಂಗ್ ಕ್ಷೇತ್ರದ ದೈತ್ಯ ಲಾರ್ಸನ್ ಅಂಡ್ ಟೂಬ್ರೊ ಕಂಪನಿ 14 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸಿದೆ.
ಹೆಚ್ಚುತ್ತಿರುವ ಸ್ಪರ್ದೆ ಹಾಗೂ ವ್ಯವಹಾರ ಕುಸಿತದಿಂದಾಗಿ ಈ ವರ್ಷದ ಏಪ್ರಿಲ್ ಮತ್ತು ಸೆಪ್ಟೆಂಬರ್ ತಿಂಗಳುಗಳ ಅವಧಿಯಲ್ಲಿ ಈ ಕ್ರಮ ತೆಗೆದುಕೊಳ್ಳುವುದು ಅವಶ್ಯಕವಾಗಿತ್ತು, ಕಂಪನಿಯನ್ನು ಉತ್ತಮ ಗಾತ್ರ ಹಾಗೂ ಅಭಿವೃದ್ಧಿಗೊಳಿಸಲು ಈ ಕ್ರಮದ ಅಗತ್ಯವಿತ್ತು ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಆರ್ ಶಂಕರ್ ರಾಮನ್ ತಿಳಿಸಿದ್ದಾರೆ.
ಕಂಪನಿಯ ವಿವಿಧ ವಲಯಗಳಲ್ಲಿ ಒಟ್ಟು 1.2 ಲಕ್ಷ ನೌಕರರನ್ನು ಹೊಂದಿದ್ದೇವೆ. 2017ರ ಆರ್ಥಿಕ ವರ್ಷವನ್ನು ಗಮನದಲ್ಲಿಟ್ಟುಕೊಂಡು ಈ ವರ್ಶದ ಏಪ್ರಿಲ್ ತಿಂಗಳಿಂದ ಸೆಪ್ಟಂಬರ್ ವರೆಗೆ 14 ಸಾವಿರ ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ ಎಂದು ಹೇಳಿದ್ದಾರೆ.
ಹೆಚ್ಚುತ್ತಿರುವ ಸ್ಪರ್ದೆಯಲ್ಲಿ ತಮ್ಮ ಕಂಪನಿಯನ್ನು ವಿಭಿನ್ನವಾಗಿ ಅಭಿವೃದ್ಧಿಗೊಳಿಸುವುದು, ಹಣಕಾಸು ಸೇವೆಗಳ ಬಗ್ಗೆ ಗಮನ ಕೇಂದ್ರೀಕರಿಸುವುದು ಜೊತೆಗೆ ಆಂತರಿಕ ಡಿಜಿಟಲೀಕರಣ ಮಾಡುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಎಲ್ ಅಂಡ್ ಟಿ ಸಂಸ್ಥೆಯ ವ್ಯವಹಾರವು ಕಳೆದ ವರ್ಷ ಶೇ.8.6ರಷ್ಟು ಹೆಚ್ಚಳವಾಗಿ 46,885 ಕೋಟಿ ರೂಪಾಯಿ ತಲುಪಿತ್ತು. ಅದರ ಲಾಭವು 1,197 ಕೋಟಿಯಿಂದ 2,044 ಕೋಟಿ ರೂ.ಗೆ ಹೆಚ್ಚಾಯಿತು. ಆದರೆ, ಮುಂದಿನ 5 ವರ್ಷಗಳಲ್ಲಿ ಸಂಸ್ಥೆ ತನ್ನ ವ್ಯವಹಾರವನ್ನು 2 ಲಕ್ಷ ಕೋಟಿಗೆ ಹೆಚ್ಚಿಸಿಕೊಳ್ಳುವ ಗುರಿಯನ್ನು ಇಟ್ಟುಕೊಂಡಿದೆ.
ಎಲ್ ಅಂಡ್ ಟಿ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸ ಕಳೆದುಕೊಂಡಿರುವುದು ಇದೇ ಮೊದಲು. ಅಷ್ಟೇ ಅಲ್ಲ, ಭಾರತದ ಕಾರ್ಪೊರೇಟ್ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಮೊತ್ತದ ಉದ್ಯೋಗ ನಷ್ಟ ಪ್ರಕರಣಗಳಲ್ಲೊಂದೆನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


