ವಾಣಿಜ್ಯ

ಬಡ್ಡಿ ರಹಿತ ಬ್ಯಾಕಿಂಗ್ ಗೆ ಆರ್ ಬಿಐ ಪ್ರಸ್ತಾವನೆ ಸಲ್ಲಿಕೆ!

ಇಸ್ಲಾಂ ಷರಿಯಾ ಕಾನೂನಿಗೆ ಅನುಸಾರವಾಗಿ ದೇಶದಲ್ಲಿ ಬಡ್ಡಿ ರಹಿತ ಬ್ಯಾಕಿಂಗ್ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಬಡ್ಡಿ ರಹಿತ ಬ್ಯಾಕಿಂಗ್ ಗೆ ಆರ್ ಬಿಐ ಪ್ರಸ್ತಾವನೆ ಸಲ್ಲಿಕೆ!
ಸಂಗ್ರಹ ಚಿತ್ರ
Published On :

ನವದೆಹಲಿ: ಇಸ್ಲಾಂ ಷರಿಯಾ ಕಾನೂನಿಗೆ ಅನುಸಾರವಾಗಿ ದೇಶದಲ್ಲಿ ಬಡ್ಡಿ ರಹಿತ ಬ್ಯಾಕಿಂಗ್ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಧಾರ್ಮಿಕ ಕಾರಣಗಳಿಂದಾಗಿ ಬ್ಯಾಂಕ್ ವಹಿವಾಟಿನಿಂದ ದೂರಉಳಿಯುವ ಜನರನ್ನು ಕೂಡ ವಿತ್ತೀಯ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಈ ಬಗ್ಗೆ ಈಗಾಗಲೇ  ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ ಎಂದು ತಿಳಿದುಬಂದಿದೆ. ಹಣವನ್ನು ಬಡ್ಡಿಯ ಆಧಾರದಲ್ಲಿ ಠೇವಣಿ ಇಡುವುದು ಮತ್ತು ಸಾಲಕ್ಕೆ ಬಡ್ಡಿ ಪಡೆಯುವುದು ಇಸ್ಲಾಂನ ಪ್ರಕಾರ ಪಾಪಕೃತ್ಯವಾಗಿದ್ದು, ಇದೇ ಅಂಶದ  ಆಧಾರದ ಮೇಲೆ ಆರ್ ಬಿಐ ಬಡ್ಡಿರಹಿತ ಬ್ಯಾಂಕಿಂಗ್ ವಹಿವಾಟ ನಡೆಸುವ ಕುರಿತು ಚಿಂತನೆ ನಡೆಸಿದೆ.

ಈ ಬಗ್ಗೆ ಕೇಂದ್ರ ವಿತ್ತ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿರುವ ಆರ್ ಬಿಐ, ತತ್ ಕ್ಷಣಕ್ಕೆ ಈ ಯೋಜನೆ ಜಾರಿ ಕಷ್ಟಕರವಾಗಿದ್ದು, ಒಮ್ಮೆಗೇ ಜಾರಿ ಸಾಧ್ಯವಿಲ್ಲ. ಪ್ರಸ್ತುತ ಇರುವ ಬ್ಯಾಂಕುಗಳಲ್ಲೇ ಈ ನಿಯಮವನ್ನು ಹಂತ-ಹಂತವಾಗಿ  ಜಾರಿಗೊಳಿಸಬಹುದಾಗಿದೆ ಎಂದು ತನ್ನ ಪ್ರಸ್ತಾವನೆಯಲ್ಲಿ ಅಭಿಪ್ರಾಯಪಟ್ಟಿದೆ.

ವ್ಯವಹಾರ ಹೇಗೆ ಮತ್ತು ಗ್ರಾಹಕನಿಗೆ ಅನುಕೂಲವೇನು?
ಸಾಮಾನ್ಯವಾಗಿ ಪ್ರಸ್ತುತ ಇರುವ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಖಾತೆದಾರ ಠೇವಣಿ ಇಡುವ ಹಣವನ್ನು ಮತ್ತೊರ್ವನಿಗೆ ಸಾಲ ನೀಡಿ, ಆ ಸಾಲಕ್ಕೆ ಬಡ್ಡಿ ಪಡೆಯಲಾಗುತ್ತದೆ. ಹೀಗೆ ಪಡೆಯಲಾದ ಬಡ್ಡಿಯನ್ನು ಠೇವಣಿದಾರರಿಗೆ ಅಲ್ಪ  ಪ್ರಮಾಣದ ಬಡ್ಡಿಯನ್ನು ಬ್ಯಾಂಕುಗಳ ನೀಡುತ್ತವೆ. ಆದರೆ ಇಸ್ಲಾಮಿಕ್ ಷರಿಯಾ ಕಾನೂನಿನಲ್ಲಿ ಬಡ್ಡಿಪಡೆಯುವುದು ಮತ್ತು ಬಡ್ಡಿಹೇರುವುದು ನಿಷಿದ್ಧ. ಠೇವಣಿ ಹಣವನ್ನು ಷೇರುಮಾರುಕಟ್ಟೆಯಂತಹ ಬೇರೆ ಬೇರೆ ಉಧ್ಯಮಗಳ ಮೇಲೆ  ಹೂಡಿಕೆ ಮಾಡಿ ಬಂದ ಲಾಭ ಅಥವಾ ನಷ್ಟವನ್ನು ಗ್ರಾಹಕನೊಂದಿಗೆ ಹಂಚಿಕೊಳ್ಳುವುದಾಗಿದೆ.

ಹೀಗಾಗಿ ಈ ನೂತನ ಕಾನೂನಿಂದಾಗಿ ಪಡೆದ ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ ಎಂಬ ಆತಂಕವಿರುವುದಿಲ್ಲ. ಅಂತೆಯೇ ಸಾಲದ ಹೊರೆಯನ್ನು ಅನುಭವಿಸಬೇಕಾಗಿರುವುದಿಲ್ಲ ಎಂದು ಆರ್ಥಿಕ ತಜ್ಞರು  ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.