ಎಟಿಎಂ ಸೇವೆ ಸಹಜ ಸ್ಥಿತಿಗೆ ಬರಲು ಇನ್ನೂ 10 ದಿನ ಬೇಕು: ಎಸ್‌ಬಿಐ
500 ಹಾಗೂ 1000 ರುಪಾಯಿ ನೋಟ್ ನಿಷೇಧದಿಂದಾಗಿ ಬ್ಯಾಂಕ್ ಹಾಗೂ ಎಟಿಎಂ ಮುಂದೆ ಕ್ಯೂ ನಿಂತು, ಹಣಕ್ಕಾಗಿ ಪರದಾಡುತ್ತಿರುವ ಜನಕ್ಕೆ...

Published On :
ಮುಂಬೈ: 500 ಹಾಗೂ 1000 ರುಪಾಯಿ ನೋಟ್ ನಿಷೇಧದಿಂದಾಗಿ ಬ್ಯಾಂಕ್ ಹಾಗೂ ಎಟಿಎಂ ಮುಂದೆ ಕ್ಯೂ ನಿಂತು, ಹಣಕ್ಕಾಗಿ ಪರದಾಡುತ್ತಿರುವ ಜನಕ್ಕೆ ಇದೊಂದು ಶಾಕಿಂಗ್ ಸುದ್ದಿ. ಎಟಿಎಂ ಸೇವೆ ಸಹಜ ಸ್ಥಿತಿಗೆ ಬರಲು ಇನ್ನೂ ಹತ್ತು ದಿನಗಳು ಬೇಕಾಗಬಹುದು ಎಂದು ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ದೇಶದಲ್ಲಿ ಎಟಿಎಂ ಗಳ ಸಂಖ್ಯೆ ಸಾಕಷ್ಟು ದೊಡ್ಡದೇ ಇದೆ. ಆದರೆ ಅದಕ್ಕೆ ಹಣ ತುಂಬುವ ಸೇವಾದಾರರು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಮತ್ತು ಸದ್ಯಕ್ಕೆ ಎಟಿಎಂ ಬಳಕೆದಾರರ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿರುವುದರಿಂದ ಒಟ್ಟಾರೆಯಾಗಿ ಎಟಿಎಂ ಸೇವೆ ಮಾಮೂಲಿಗೆ ಬರಲು ಕನಿಷ್ಠ ಹತ್ತು ಇನ್ನೂ ದಿನಗಳು ಬೇಕಾಗಬಹುದು ಎಂದು ಎಸ್‌ಬಿಐ ಹೇಳಿದೆ.
ಆರ್ ಬಿಐ ಹೇಳಿರುವ ಪ್ರಕಾರ ಇಂದಿನಿಂದಲೇ ದೇಶಾದ್ಯಂತ ಎಟಿಎಂ ಸೇವೆಗಳು ಬಳಕೆದಾರರಿಗೆ ಲಭ್ಯವಾಗಲಿದ್ದು ನಗದಿಗಾಗಿ ಪರದಾಡುತ್ತಿರುವ ಜನರ ಸಮಸ್ಯೆ ಬಹುಮಟ್ಟಿಗೆ ನಿವಾರಣೆಯಾಗಲಿದೆ.
ಸರ್ಕಾರದ ಹೊಸ ಸೂಚನೆಯ ಪ್ರಕಾರ ಎಟಿಎಂ ಗಳಲ್ಲಿ ದಿನಕ್ಕೆ ಒಬ್ಬ ಬಳಕೆದಾರರ ಗರಿಷ್ಠ 2,000 ರೂ. ನಗದನ್ನು ಮಾತ್ರವೇ ಪಡೆಯುವುದಕ್ಕೆ ಅವಕಾಶವಿದೆ. ಆ ಪ್ರಕಾರ ಎಟಿಎಂ ವ್ಯವಸ್ಥೆಯನ್ನು ಕಾನ್‌ಫಿಗರೇಶನ್ ಮಾಡಬೇಕಿದೆ. ಇದನ್ನು ಒಂದರ ಬಳಿಕ ಒಂದಾಗಿ ಮಾಡಲಾಗುತ್ತಿದೆ. ಎಲ್ಲ ಬ್ಯಾಂಕುಗಳ ಎಟಿಎಂ ಸೇರಿ ದೇಶದಲ್ಲಿ ಒಟ್ಟು ಎರಡು ಲಕ್ಷ ಎಟಿಎಂ ಗಳಿವೆ. ಆದರೆ ಇವುಗಳ ಸೇವಾ ಪೂರೈಕೆದಾರರು ಕೇವಲ ಮೂರರಿಂದ ನಾಲ್ಕರ ಸಂಖ್ಯೆಯಲ್ಲಿದ್ದಾರೆ; ಜನರು ಇದನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕಾಗಿದೆ ಎಂದು ಬ್ಯಾಂಕ್ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


