ಸ್ಯಾಮಸಂಗ್ ನಿಂದ ಮುಂದಿನ ವರ್ಷ ಮಡಚಬಲ್ಲ ಸ್ಮಾರ್ಟ್ ಫೋನ್ ಬಿಡುಗಡೆ ಸಾಧ್ಯತೆ
ಗ್ಯಾಲೆಕ್ಸಿ ನೋಟ್ ೭ ಸ್ಮಾರ್ಟ್ ಫೋನ್ ಗಳು ಸ್ಫೋಟಿಸುತ್ತಿರುವ ಹಿನ್ನಲೆಯಲ್ಲಿ ಆ ಮಾದರಿಯ ೨.೮ ದಶಲಕ್ಷ ಫೋನುಗಳನ್ನು ಹಿಂಪಡೆದು ಹಲವು ತೊಂದರೆಗಳನ್ನು ಅನುಭವಿಸುತ್ತಿರುವ ದಕ್ಷಿಣ ಕೊರಿಯಾದ

Published On :
ಸಿಯೋಲ್: ಗ್ಯಾಲೆಕ್ಸಿ ನೋಟ್ ೭ ಸ್ಮಾರ್ಟ್ ಫೋನ್ ಗಳು ಸ್ಫೋಟಿಸುತ್ತಿರುವ ಹಿನ್ನಲೆಯಲ್ಲಿ ಆ ಮಾದರಿಯ ೨.೮ ದಶಲಕ್ಷ ಫೋನುಗಳನ್ನು ಹಿಂಪಡೆದು ಹಲವು ತೊಂದರೆಗಳನ್ನು ಅನುಭವಿಸುತ್ತಿರುವ ದಕ್ಷಿಣ ಕೊರಿಯಾದ ತಂತ್ರಜ್ಞಾನ ದೈತ್ಯ ಸ್ಯಾಮಸಂಗ್ ಮುಂದಿನ ವರ್ಷ ಮಡಚಬಲ್ಲ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
"ಗ್ಯಾಲಕ್ಸಿ ಎಕ್ಸ್ ಎಂದು ಈ ಮಡಚಬ ಮಾದರಿಯನ್ನು ಹೆಸರಿಸಲಾಗಿದೆ" ಎಂದು ಮಾಧ್ಯಮವೊಂದು ಶುಕ್ರವಾರ ವರದಿ ಮಾಡಿದೆ.
ಈ ಮಧ್ಯೆ ಈ ಸಂಸ್ಥೆಯ ವಾಷಿಂಗ್ ಮೆಷಿನ್ ಗಳು ಸ್ಫೋಟಗೊಳ್ಳುತ್ತಿರುವ ಸುದ್ದಿಗಳು ಕೂಡ ಬರುತ್ತಿವೆ. ಇತ್ತೀಚೆಗಷ್ಟೇ ದಕ್ಷಿಣ ಕೊರಿಯಾ ಅಧಿಕಾರಿಗಳು ಭ್ರಷ್ಟಾಚಾರದ ಆರೋಪದ ಮೇಲೆ ಸ್ಯಾಮಸಂಗ್ ಕಚೇರಿಯ ಮೇಲೆ ದಾಳಿ ಮಾಡಿದ್ದನ್ನು ಕೂಡ ನೆನಪಿಸಿಕೊಳ್ಳಬಹುದು.
ಈಗ ೨೦೧೭ ರ ಹೊತ್ತಿಗೆ ಮಡಚಬಲ್ಲ ಸ್ಮಾರ್ಟ್ ಫೋನ್ ಗಳನ್ನು ಸ್ಯಾಮಸಂಗ್ ಸಂಸ್ಥೆ ಮುಂದಾಗಿರುವುದು ಹಲವು ತಂತ್ರಜ್ಞಾನ ಪಂಡಿತರ ಕುತೂಹಲ ಕೆರಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


