ಸೈರಸ್ ಮಿಸ್ತ್ರಿ ಬೆಂಬಲಕ್ಕೆ ನಿಂತ ಟಾಟಾ ಗ್ರೂಪ್ ನ ಭಾರತೀಯ ಹೋಟೆಲ್ ಗಳ ನಿರ್ದೇಶಕರು
ಟಾಟಾ ಗ್ರೂಪ್ ನ ಭಾರತೀಯ ಹೋಟೆಲ್ ಗಳ ಸ್ವತಂತ್ರ ನಿರ್ದೇಶಕರು ಟಾಟಾ ಸನ್ಸ್ ಅಧ್ಯಕ್ಷ ಹುದ್ದೆಯಿಂದ ವಜಾಗೊಂಡಿರುವ ಸೈರಸ್....

Published On :
ಮುಂಬೈ: ಟಾಟಾ ಗ್ರೂಪ್ ನ ಭಾರತೀಯ ಹೋಟೆಲ್ ಗಳ ಸ್ವತಂತ್ರ ನಿರ್ದೇಶಕರು ಟಾಟಾ ಸನ್ಸ್ ಅಧ್ಯಕ್ಷ ಹುದ್ದೆಯಿಂದ ವಜಾಗೊಂಡಿರುವ ಸೈರಸ್ ಮಿಸ್ತ್ರಿ ಅವರ ಬೆಂಬಲಕ್ಕೆ ನಿಂತಿವೆ.
ಇಂದು ಬಾಂಬೆ ಹೌಸ್ ನಲ್ಲಿ ಸೈರಸ್ ಮಿಸ್ತ್ರಿ ನೇತೃತ್ವದಲ್ಲಿ ಭಾರತೀಯ ಹೋಟೆಲ್ ಗಳ ನಿರ್ದೇಶಕರ ಸಭೆ ನಡೆಯಿತು, ಈ ವೇಳೆ ಬಾಂಬೆ ಹೌಸ್ ಹೊರಗಡೆ ಮಾಧ್ಯಮ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ನಡುವೆ ತೀವ್ರ ಜಟಾಪಟಿಯೂ ನಡೆಯಿತು.
ಸಭೆಯ ನಂತರ ಹೋಟೆಲ್ ಗಳ ಸ್ವತಂತ್ರ ನಿರ್ದೇಶಕರು ತಮ್ಮ ಅಧ್ಯಕ್ಷರ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿರುವುದಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮಿಸ್ತ್ರಿ ಅವರು ಸಭೆಯಲ್ಲಿ ಈ ವರ್ಷದ ವಾರ್ಷಿಕ ವಹಿವಾಟಿನ ಮೌಲ್ಯ ಮಾಪನ ಮಾಡಿದ್ದು, ಅವರು ತೆಗೆದುಕೊಂಡ ನಿರ್ಧಾರ, ಕಾರ್ಯತಂತ್ರಗಳ ಸೂಚನೆ ಬಗ್ಗೆ ಸ್ವತಂತ್ರ ನಿರ್ದೇಶಕರು ಸರ್ವಾನುಮತದಿಂದ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಸೈರಸ್ ಮಿಸ್ತ್ರಿ ಅವರ ನಾಯಕತ್ವದ ಬಗ್ಗೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು ಎಂದು ಪ್ರಕಟಣೆ ತಿಳಿಸಿದೆ.
ಸೈರಸ್ ಮಿಸ್ತ್ರಿ ಅವರು ಟಾಟಾ ಸಮೂಹದಲ್ಲಿ ಪ್ರಮುಖ ಪಾಲುದಾರ ಸಂಸ್ಥೆಯಾಗಿರುವ ಟಾಟಾ ಸನ್ಸ್ ಅಧ್ಯಕ್ಷ ಹುದ್ದೆಯಿಂದ ವಜಾಗೊಂಡಿದ್ದು, ಟಾಟಾ ಸ್ಟೀಲ್, ಟಿಸಿಎಸ್ ಮತ್ತು ಟಾಟಾ ಮೋಟಾರ್ಸ್ ಹಾಗೂ ಗ್ರೂಪ್ ನ ಇತರೆ ಸಂಸ್ಥೆಗಳ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Tata Groupಟಾಟಾ ಗ್ರೂಪ್Cyrus Mistryಸೈರಸ್ ಮಿಸ್ತ್ರಿIndian Hotelsindependent directorsಭಾರತೀಯ ಹೋಟೆಲ್ಸ್ವತಂತ್ರ ನಿರ್ದೇಶಕರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


